ಮಗನ ಶಾಲೆ ಶುಲ್ಕ ಪಾವತಿಸಲು ಬೇಡುವ ಸ್ಥಿತಿ ಬಂದಿತ್ತು: ಬಂಧನದ ನಂತರದ ಸ್ಥಿತಿ ನೆನೆದ ಮನೀಷ್ ಸಿಸೋಡಿಯಾ
ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ತಮ್ಮನ್ನು ಪಕ್ಷದ ನಾಯಕ, ಅರವಿಂದ್ ಕೇಜ್ರಿವಾಲ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ನಡೆದಿತ್ತು ಎಂದು ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಮನೀಷ್ ಸಿಸೋಡಿಯಾ ತಮ್ಮ ಬಂಧನದ ನಂತರದ ಪರಿಸ್ಥಿತಿಯನ್ನು ನೆನೆಪಿಸಿಕೊಂಡಿದ್ದಾರೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಬಳಿಕ ತಮ್ಮನ್ನು ಪಕ್ಷದ ನಾಯಕ, ಅರವಿಂದ್ ಕೇಜ್ರಿವಾಲ್ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ನಡೆದಿತ್ತು ಎಂದು ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ನನ್ನನ್ನು ಸಿಲುಕಿಸಿದ್ದಾರೆ ಎಂದು ನನಗೆ ಹೇಳಲಾಯಿತು. ಕೇಜ್ರಿವಾಲ್ ಹೆಸರನ್ನು ಹೇಳಿದರೆ ನನ್ನನ್ನು ಪ್ರಕರಣಗಳಿಂದ ಹೊರತರುವುದಾಗಿ ಜೈಲಿನಲ್ಲಿದ್ದಾಗ ಹೇಳಿದ್ದರು ಎಂದು ಪಕ್ಷದ ಕಾರ್ಯಕ್ರಮ ಜನತಾ ಕೀ ಅದಾಲತ್ ನಲ್ಲಿ ಸಿಸೋಡಿಯಾ ಹೇಳಿದ್ದಾರೆ. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ ಮತ್ತು ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ತಮ್ಮ ಪರವಾಗಿ ತೀರ್ಪು ನೀಡಿದ ನಂತರವೇ ಅವರು ಹುದ್ದೆಗೆ ಮರಳುತ್ತಾರೆ ಎಂದು ಸಿಸೋಡಿಯಾ ಹೇಳಿದ್ದಾರೆ. ಜನರ ತೀರ್ಪಿನ ನಂತರವೇ ದೆಹಲಿ ಸರ್ಕಾರದಲ್ಲಿ ಪಾತ್ರ ವಹಿಸುವುದಾಗಿ ಸಿಸೋಡಿಯಾ ಕೂಡ ಹೇಳಿದ್ದಾರೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಕೇಜ್ರಿವಾಲ್ ರಾಜೀನಾಮೆ ನೀಡುವುದಾಗಿ ಅಚ್ಚರಿಯ ಘೋಷಣೆ ಮಾಡಿದ್ದರು.
ನನಗೆ ಬಿಜೆಪಿಗೆ ಸೇರುವಂತೆ ಆಹ್ವಾನ ಬಂದಿತ್ತು ಎಂದು ಹೇಳಿರುವ ಸಿಸೋಡಿಯಾ, ಆ ಅವಧಿಯಲ್ಲಿ ಎದುರಿಸಿದ ಸಮಸ್ಯೆಗಳನ್ನು ನೆನಪಿಸಿಕೊಂಡಿದ್ದಾರೆ. "2002 ರಲ್ಲಿ, ನಾನು ಪತ್ರಕರ್ತನಾಗಿದ್ದಾಗ, ನಾನು ₹ 5 ಲಕ್ಷ ಮೌಲ್ಯದ ಫ್ಲಾಟ್ ಖರೀದಿಸಿದೆ, ಅದನ್ನು ತೆಗೆದುಕೊಳ್ಳಲಾಯಿತು, ನನ್ನ ಖಾತೆಯಲ್ಲಿ ₹ 10 ಲಕ್ಷ ಇತ್ತು, ಅದನ್ನೂ ಸಹ ಬಿಡಲಿಲ್ಲ. ನನ್ನ ಮಗನ ಶುಲ್ಕವನ್ನು ಪಾವತಿಸಲು ನಾನು ಸಹಾಯಕ್ಕಾಗಿ ಬೇಡಿಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



