ದೇಶ

ಪ್ರಧಾನಿ ಮೋದಿ ದೆಹಲಿ ನಿವಾಸಕ್ಕೆ ಹೊಸ ಅತಿಥಿ ಆಗಮನ; ಯಾರಿದು 'ದೀಪಜ್ಯೋತಿ'?: ವಿಡಿಯೋ ನೋಡಿ

ಪ್ರಧಾನಿಯವರು ಹೊಸ ಅತಿಥಿಗೆ ಪ್ರೀತಿಯಿಂದ 'ದೀಪಜ್ಯೋತಿ' ಎಂದು ಹೆಸರಿಟ್ಟಿದ್ದಾರೆ.

ಪ್ರಧಾನಿ ಮೋದಿ ದೆಹಲಿ ನಿವಾಸಕ್ಕೆ ಹೊಸ ಅತಿಥಿ ಆಗಮನ; ಯಾರಿದು 'ದೀಪಜ್ಯೋತಿ'?: ವಿಡಿಯೋ ನೋಡಿ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸಕ್ಕೆ ಹೊಸ ಪುಟ್ಟ ಅತಿಥಿಯ ಆಗಮನವಾಗಿದೆ. ಅದನ್ನು ಪ್ರಧಾನಿಯವರು ಪ್ರೀತಿಯಿಂದ ಅಪ್ಪಿ ಮುದ್ದಾಡಿ ಕೊರಳಿಗೆ ಹೂವಿನ ಹಾರ, ಪೂಜೆ ಮಾಡಿ ಶಾಲು ಹಾಕಿ ಬರಮಾಡಿಕೊಂಡಿದ್ದಾರೆ.

ಅದು ಬೇರೆ ಯಾರೂ ಅಲ್ಲ, ಪುಟ್ಟ ಕರು, ಅದನ್ನು ನೋಡಿದರೆ ಎಂಥವರಿಗೂ ಒಂದು ಸಾರಿ ಅಪ್ಪಿ ಮುದ್ದಾಡಬೇಕು ಎನಿಸಬಹುದು.

ದೆಹಲಿಯ ಪ್ರಧಾನ ಮಂತ್ರಿಗಳ ನಿವಾಸದಲ್ಲಿದ್ದ ಹಸು ಕರು ಹಾಕಿದ್ದು ಕಂದು ಬಣ್ಣದ ಕರುವಿನ ಹಣೆಯ ಮೇಲೆ ಬಿಳಿಯ ಬೆಳಕಿನ ಗುರುತು ಇದೆ. ಹೀಗಾಗಿ ಪ್ರಧಾನಿಯವರು ಕರುವಿಗೆ ಪ್ರೀತಿಯಿಂದ 'ದೀಪಜ್ಯೋತಿ' ಎಂದು ಹೆಸರಿಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.