ದೇಶ

ಕೇಜ್ರಿವಾಲ್ ಹತ್ಯೆಗೆ 'ಸಂಚು', ಅವರಿಗೆ ಏನಾದರೂ ಆದ್ರೆ ಅದಕ್ಕೆ ಬಿಜೆಪಿ ಹೊಣೆ: ಎಎಪಿ

ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಕೇಜ್ರಿವಾಲ್ ಅವರ 'ಪಾದಯಾತ್ರೆ' ವೇಳೆ "ಬಿಜೆಪಿ ಗೂಂಡಾಗಳು" ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಎಎಪಿ ನಾಯಕರು ಶುಕ್ರವಾರ ಹೇಳಿದ್ದರು.

ಕೇಜ್ರಿವಾಲ್ ಹತ್ಯೆಗೆ 'ಸಂಚು', ಅವರಿಗೆ ಏನಾದರೂ ಆದ್ರೆ ಅದಕ್ಕೆ ಬಿಜೆಪಿ ಹೊಣೆ: ಎಎಪಿ
ಅರವಿಂದ್ ಕೇಜ್ರಿವಾಲ್
Published On :

ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ, ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು "ಆಳವಾದ ಸಂಚು" ರೂಪಿಸಲಾಗಿದೆ ಎಂದು ಆರೋಪಿಸಿದ ಆಮ್ ಆದ್ಮಿ ಪಕ್ಷ(ಎಎಪಿ), ಅವರಿಗೆ ಏನಾದರೂ ಆದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದು ಶನಿವಾರ ಎಚ್ಚರಿಸಿದೆ.

ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಕೇಜ್ರಿವಾಲ್ ಅವರ 'ಪಾದಯಾತ್ರೆ' ವೇಳೆ "ಬಿಜೆಪಿ ಗೂಂಡಾಗಳು" ಅವರ ಮೇಲೆ ದಾಳಿ ಮಾಡಿದ್ದಾರೆ ಎಂದು ಎಎಪಿ ನಾಯಕರು ಶುಕ್ರವಾರ ಹೇಳಿದ್ದರು.

ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು, ನಿನ್ನೆ ನಡೆದ "ಘಟನೆಯಲ್ಲಿ ಪೋಲಿಸ್ ಸಹಭಾಗಿತ್ವವು ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ರೂಪಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿ ಅವರನ್ನು ಮುಗಿಸುವ ಶತ್ರುವಾಗಿದೆ" ಎಂದು ಆರೋಪಿಸಿದರು.

ಸಂಜಯ್ ಸಿಂಗ್ ಅವರ ಆರೋಪದ ಬಗ್ಗೆ ಪೊಲೀಸರು ಅಥವಾ ಬಿಜೆಪಿಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಆದಾಗ್ಯೂ, ವಿಕಾಸಪುರಿ ಘಟನೆಯ ಹೊರತಾಗಿಯೂ, ಕೇಜ್ರಿವಾಲ್ ವೇಳಾಪಟ್ಟಿಯ ಪ್ರಕಾರ 'ಪಾದಯಾತ್ರೆ' ಅಭಿಯಾನವನ್ನು ಮುಂದುವರೆಸುತ್ತಾರೆ ಎಂದು ಎಎಪಿ ನಾಯಕ ಹೇಳಿದರು.

ಕೇಜ್ರಿವಾಲ್ ಮೇಲೆ ದಾಳಿ ಬಗ್ಗೆ ಎಎಪಿ ಏಕೆ ದೂರು ದಾಖಲಿಸಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಪೊಲೀಸರು "ನಿಷ್ಪಕ್ಷಪಾತ"ವಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಮತ್ತು ಬಿಜೆಪಿ ಯುವ ಘಟಕಕ್ಕೆ ಸೇರಿದ ದಾಳಿಕೋರರ ಗುಂಪನ್ನು ತಡೆಯಲು ಅದರ ಅಧಿಕಾರಿಗಳು ಏನನ್ನೂ ಮಾಡಲಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.