ದೇಶ

ಉತ್ತರ ಪ್ರದೇಶ: ಸಿಲಿಂಡರ್ ಸ್ಫೋಟ, ಆರು ಮಂದಿ ಸಾವು; ಮೂವರಿಗೆ ಗಂಭೀರ ಗಾಯ

ಸಿಕಂದರಾಬಾದ್‌ನ ಆಶಾಪುರಿ ಕಾಲೋನಿಯಲ್ಲಿರುವ ರಿಯಾಜುದ್ದೀನ್ ಎಂಬುವವರ ಮನೆಯಲ್ಲಿ 19 ಮಂದಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟ ಸಂಭವಿಸಿದೆ.

ಉತ್ತರ ಪ್ರದೇಶ: ಸಿಲಿಂಡರ್ ಸ್ಫೋಟ, ಆರು ಮಂದಿ ಸಾವು; ಮೂವರಿಗೆ ಗಂಭೀರ ಗಾಯ
ಸಿಲಿಂಡರ್ ಸ್ಫೋಟ
Published On :

ಲಕ್ನೋ: ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಪ್ರದೇಶದ ಆಶಾಪುರಿ ಕಾಲೋನಿಯಲ್ಲಿ ಮನೆ ಕುಸಿದು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ನಂತರ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮೃತರನ್ನು ರಿಯಾಜುದ್ದೀನ್ ಅಲಿಯಾಸ್ ರಾಜು (50), ಅವರ ಪತ್ನಿ ರುಖ್ಸಾನಾ (45), ಸಲ್ಮಾನ್ (16), ತಮನ್ನಾ (24), ಹಿವ್ಜಾ (3) ಮತ್ತು ಆಸ್ ಮೊಹಮ್ಮದ್ (26) ಎಂದು ಗುರುತಿಸಲಾಗಿದೆ. ರಿಯಾಜುದ್ದೀನ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 19 ಜನರು ವಾಸಿಸುತ್ತಿದ್ದರು ಎಂದು ಬುಲಂದ್‌ಶಹರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ಎಂಟು ನಿವಾಸಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರಿಯಾಜುದ್ದೀನ್ ಅವರ ಪತ್ನಿಯ ಆಸ್ಪತ್ರೆಗೆ ದಾಖಲಾಗಿ ವಾಪಾಸದ ನಂತರ ಚಿಕಿತ್ಸೆಗಾಗಿ ಆಕ್ಸಿಜನ್ ಸಿಲಿಂಡರ್ ಮತ್ತು ಅದರ ಪರಿಕರಗಳನ್ನು ಕುಟುಂಬವು ಇತ್ತೀಚೆಗೆ ತಂದಿತ್ತು. ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಧ್ರುವ ಕಾಂತ್ ಠಾಕೂರ್ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿ, ವೈದ್ಯಕೀಯ ತಂಡ ಮತ್ತು ಸ್ಥಳೀಯ ಆಡಳಿತ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಹೇಳಿದರು. ಗಾಯಾಳುಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಕಾಂತ್ ಠಾಕೂರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.