ನಾಸಿಕ್: ಶೂಟಿಂಗ್ ಅಭ್ಯಾಸದ ವೇಳೆ ಶೆಲ್ ಸ್ಫೋಟ, ಇಬ್ಬರು ಅಗ್ನಿವೀರರು ಹುತಾತ್ಮ
ಗುರುವಾರ ಮಧ್ಯಾಹ್ನ ನಾಸಿಕ್ ರಸ್ತೆ ಪ್ರದೇಶದ ಆರ್ಟಿಲರಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ. ಅಗ್ನಿವೀರ್‌ಗಳಾದ ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿಟ್ (21) ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆರ್ಟಿಲರಿ ಸೆಂಟರ್‌ನಲ್ಲಿ ಶೂಟಿಂಗ್ ಅಭ್ಯಾಸದ ವೇಳೆ ಭಾರತೀಯ ಫೀಲ್ಡ್ ಗನ್‌ನಿಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರ್‌ಗಳು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ನಾಸಿಕ್ ರಸ್ತೆ ಪ್ರದೇಶದ ಆರ್ಟಿಲರಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ. ಅಗ್ನಿವೀರ್‌ಗಳಾದ ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿಟ್ (21) ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಗ್ನಿವೀರರ ತಂಡವೊಂದು ಭಾರತೀಯ ಫೀಲ್ಡ್ ಗನ್ ನ್ನು ಶೆಲ್ ಗಳಿಂದ ಸಿಡಿಸುತ್ತಿದ್ದಾಗ ಅವುಗಳಲ್ಲಿ ಒಂದು ಸ್ಪೋಟಗೊಂಡಿದೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನೂ ದೇವಲಾಲಿಯ ಎಂ.ಎಚ್. ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಹುತಾತ್ಮರಾದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಹವಾಲ್ದಾರ್ ಅಜಿತ್ ಕುಮಾರ್ ನೀಡಿದ ದೂರಿನ ಮೇರೆಗೆ ದೇವಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



