ದೇಶ

ಹಿಂದೂ ಸಮಾಜ ತನ್ನ ಸುರಕ್ಷತೆಗಾಗಿ ಒಂದಾಗಬೇಕು: ಮೋಹನ್ ಭಾಗವತ್

ಹಿಂದೂಗಳು ಪ್ರತಿಯೊಬ್ಬರನ್ನು ತಮ್ಮವರೆಂದು ಪರಿಗಣಿಸುತ್ತಾರೆ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಹಿಂದೂ ಎಂಬ ಪದ ನಂತರ ಬಂದರೂ ಪ್ರಾಚೀನ ಕಾಲದಿಂದಲೂ ನಾನು ಇಲ್ಲಿ ವಾಸಿಸುತ್ತಿದ್ದೇವೆ. ಹಿಂದೂಗಳು ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ನಿರಂತರ ಸಂವಾದದ ಮೂಲಕ ಸೌಹಾರ್ದತೆಯಿಂದ ಬಾಳುತ್ತಾರೆ

ಹಿಂದೂ ಸಮಾಜ ತನ್ನ ಸುರಕ್ಷತೆಗಾಗಿ ಒಂದಾಗಬೇಕು: ಮೋಹನ್ ಭಾಗವತ್
ಮೋಹನ್ ಭಾಗವತ್
Published On :

ಬರಾನ್: ಭಾರತ ಹಿಂದೂ ರಾಷ್ಟ್ರ ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಭಾಷೆ, ಜಾತಿ ಮತ್ತು ಪ್ರಾದೇಶಿಕ ವಿವಾದಗಳನ್ನು ತೊಡೆದುಹಾಕುವ ಮೂಲಕ ಹಿಂದೂ ಸಮಾಜ ತನ್ನ ಸುರಕ್ಷತೆಗಾಗಿ ಒಂದಾಗಬೇಕು ಎಂದು ಕರೆ ನೀಡಿದ್ದಾರೆ.

ರಾಜಸ್ಥಾನದ ಬರಾನ್‌ನಲ್ಲಿ ನಡೆದ 'ಸ್ವಯಂಸೇವಕ ಏಕತ್ರಿಕರಣ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಭಾಗವತ್ ' ಹಿಂದೂಗಳು ಪ್ರತಿಯೊಬ್ಬರನ್ನು ತಮ್ಮವರೆಂದು ಪರಿಗಣಿಸುತ್ತಾರೆ ಮತ್ತು ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಹಿಂದೂ ಎಂಬ ಪದ ನಂತರ ಬಂದರೂ ಪ್ರಾಚೀನ ಕಾಲದಿಂದಲೂ ನಾನು ಇಲ್ಲಿ ವಾಸಿಸುತ್ತಿದ್ದೇವೆ. ಹಿಂದೂಗಳು ಎಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ನಿರಂತರ ಸಂವಾದದ ಮೂಲಕ ಸೌಹಾರ್ದತೆಯಿಂದ ಬಾಳುತ್ತಾರೆ. ಭಾಷೆ, ಜಾತಿ ಮತ್ತು ಪ್ರಾದೇಶಿಕ ಭಿನ್ನತೆಗಳು, ವಿವಾದಗಳನ್ನು ತೊಡೆದುಹಾಕುವ ಮೂಲಕ ಹಿಂದೂ ಸಮಾಜ ತನ್ನ ಭದ್ರತೆಗಾಗಿ ಒಂದಾಗಬೇಕು ಎಂದು ಒತ್ತಿ ಹೇಳಿದರು.

ಶಿಸ್ತು, ಕರ್ತವ್ಯ ಮತ್ತು ಗುರಿಗಳ ಕಡೆಗೆ ಸಮರ್ಪಣೆ ಅತ್ಯಗತ್ಯವಾಗಿದೆ. ಸಮಾಜವು ಕೇವಲ ವ್ಯಕ್ತಿಗಳು, ಅವರ ಕುಟುಂಬಗಳಿಂದ ರೂಪುಗೊಂಡಿಲ್ಲ, ಆದರೆ ಸಮಗ್ರ ಕಾಳಜಿಯನ್ನು ಪರಿಗಣಿಸುವ ಮೂಲಕ ಆಧ್ಯಾತ್ಮಿಕ ಸಾಧನೆಯನ್ನು ಸಾಧಿಸಬಹುದು ಎಂದು ಭಾಗವತ್ ಹೇಳಿದರು.

ಆರ್‌ಎಸ್‌ಎಸ್‌ನ ಕಾರ್ಯಚಟುವಟಿಕೆಯು ಯಾಂತ್ರಿಕವಲ್ಲ ಆದರೆ ಕಲ್ಪನೆ ಆಧಾರಿತವಾಗಿದೆ. ಇದು ಅಪ್ರತಿಮ ಸಂಸ್ಥೆಯಾಗಿದ್ದು, ಅದರ ಮೌಲ್ಯಗಳು ಗುಂಪಿನ ನಾಯಕರಿಂದ ಸ್ವಯಂಸೇವಕರು, ಅವರ ಕುಟುಂಬಗಳು ಮತ್ತು ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಸಮುದಾಯಗಳಲ್ಲಿ ವ್ಯಾಪಕ ಸಂಪರ್ಕವನ್ನು ಕಾಪಾಡಿಕೊಳ್ಳಲು ಸ್ವಯಂಸೇವಕರನ್ನು ಒತ್ತಾಯಿಸಿದ ಮೋಹನ್ ಭಾಗವತ್, ಸಮಾಜವನ್ನು ಸಶಕ್ತಗೊಳಿಸುವ ಮೂಲಕ ಸಮುದಾಯದ ಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.