ದೇಶ

ಮುಂಬೈ ನಲ್ಲಿ 16 ಡಿಗ್ರಿಗೆ ತಾಪಮಾನ ಕುಸಿತ; ನವೆಂಬರ್ ನಲ್ಲಿ 8 ವರ್ಷಗಳಲ್ಲೇ ಅತ್ಯಂತ ಹೆಚ್ಚು ಚಳಿ!

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ತನಕ ಸಾಂತಾಕ್ರೂಜ್ ವೀಕ್ಷಣಾಲಯ ಈ ತಾಪಮಾನವನ್ನು ದಾಖಲಿಸಿದೆ.

ಮುಂಬೈ ನಲ್ಲಿ 16 ಡಿಗ್ರಿಗೆ ತಾಪಮಾನ ಕುಸಿತ; ನವೆಂಬರ್ ನಲ್ಲಿ 8 ವರ್ಷಗಳಲ್ಲೇ ಅತ್ಯಂತ ಹೆಚ್ಚು ಚಳಿ!
ಮುಂಬೈ — online desk
Published On :

ಮುಂಬೈ: ಮುಂಬೈ ನಲ್ಲಿ ತಾಪಮಾನ 16 ಡಿಗ್ರಿಗೆ ತಾಪಮಾನ ಕುಸಿತವಾಗಿದೆ. ನವೆಂಬರ್ ತಿಂಗಳಲ್ಲಿ 8 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಅತ್ಯಂತ ಚಳಿ ದಾಖಲಾಗಿದೆ ಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ತನಕ ಸಾಂತಾಕ್ರೂಜ್ ವೀಕ್ಷಣಾಲಯ ಈ ತಾಪಮಾನವನ್ನು ದಾಖಲಿಸಿದೆ.

ಇದಕ್ಕೂ ಮೊದಲು, ಈ ಹವಾಮಾನ ಕೇಂದ್ರ ನವೆಂಬರ್ 11, 2016 ರಂದು ಕನಿಷ್ಠ 16.3 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿತ್ತು ಎಂದು ಐಎಂಡಿ ಮುಂಬೈನ ವಿಜ್ಞಾನಿ ಸುಷ್ಮಾ ನಾಯರ್ ಹೇಳಿದ್ದಾರೆ. ಸಾಂತಾಕ್ರೂಜ್ ವೀಕ್ಷಣಾಲಯ ಮುಂಬೈನ ಉಪನಗರಗಳಿಗೆ ಹವಾಮಾನ ನಿಯತಾಂಕಗಳನ್ನು ದಾಖಲಿಸುತ್ತದೆ.

ದ್ವೀಪ ನಗರಕ್ಕೆ ಹವಾಮಾನ ನಿಯತಾಂಕಗಳನ್ನು ದಾಖಲಿಸುವ ಮಹಾನಗರದಲ್ಲಿರುವ ಕೊಲಾಬಾ ವೀಕ್ಷಣಾಲಯ ಅದೇ ಅವಧಿಯಲ್ಲಿ 21.4 ಡಿಗ್ರಿ ಸೆಲ್ಸಿಯಸ್‌ನ ಕನಿಷ್ಠ ತಾಪಮಾನವನ್ನು ದಾಖಲಿಸಿದೆ.

ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ಮಹಾರಾಷ್ಟ್ರದಲ್ಲಿ ಶೀತ ಅಲೆಯ ಎಚ್ಚರಿಕೆ ಇಲ್ಲ ಮತ್ತು ತಾಪಮಾನವು ಹೆಚ್ಚಾಗಲಿದೆ ಎಂದು ನಾಯರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.