ದೇಶ

ಎನ್‌ಸಿಪಿ, ಶಿವಸೇನಾ ಜತೆ ಚರ್ಚಿಸಿದ ನಂತರ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಬಗ್ಗೆ ನಿರ್ಧಾರ: ಬಿಜೆಪಿ

ಇಂದು ಎಎನ್‌ಐ ಜೊತೆ ಮಾತನಾಡಿದ ಅಶೋಕ್ ಚವಾಣ್ ಅವರು, "ಮೂರು ಪಕ್ಷಗಳ ಮೈತ್ರಿ ಇದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರ ನೂತನ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.

ಎನ್‌ಸಿಪಿ, ಶಿವಸೇನಾ ಜತೆ ಚರ್ಚಿಸಿದ ನಂತರ ಮಹಾರಾಷ್ಟ್ರ  ನೂತನ ಮುಖ್ಯಮಂತ್ರಿ ಬಗ್ಗೆ ನಿರ್ಧಾರ: ಬಿಜೆಪಿ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಏಕನಾಥ್ ಶಿಂಧೆ
Published On :

ಮುಂಬೈ: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ಅಶೋಕ್ ಚವಾಣ್ ಅವರು ಬುಧವಾರ ಹೇಳಿದ್ದಾರೆ.

ಇಂದು ಎಎನ್‌ಐ ಜೊತೆ ಮಾತನಾಡಿದ ಅಶೋಕ್ ಚವಾಣ್ ಅವರು, "ಮೂರು ಪಕ್ಷಗಳ ಮೈತ್ರಿ ಇದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರ ನೂತನ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಫಲಿತಾಂಶ ಪ್ರಕಟವಾಗಿ ಕೇವಲ 4 ದಿನಗಳು ಆಗಿರುವುದರಿಂದ ಯಾವುದೇ ವಿಳಂಬವಿಲ್ಲ. ರಾಮದಾಸ್ ಅಠವಳೆ ಅವರು ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಈ ಹಿಂದೆ ನವೆಂಬರ್ 26 ರಂದು, ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು, ದೇವೇಂದ್ರ ಫಡ್ನವಿಸ್ ಅವರು ಮಹಾಯುತಿ ಸರ್ಕಾರವನ್ನು ಮುನ್ನಡೆಸಬೇಕು, "ಮಹಾರಾಷ್ಟ್ರದ ಜನರು ಅವರನ್ನು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ" ಮತ್ತು ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಬಹುದು ಅಥವಾ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಬಹುದು ಎಂದು ಹೇಳಿದ್ದರು.

ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆದಿದ್ದಾರೆ.

ಆದರೆ, ಮಹಾರಾಷ್ಟ್ರ ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಮಹಾಯುತಿ ಮೈತ್ರಿಕೂಟ ಇನ್ನೂ ನಿರ್ಧರಿಸಿಲ್ಲ. ಬಿಜೆಪಿ ಹೈಕಮಾಂಡ್ ದೇವೇಂದ್ರ ಫಡ್ನವೀಸ್ ಅವರನ್ನು ಮುಂದಿನ ಸಿಎಂ ಎಂದು "ಅಂತಿಮಗೊಳಿಸಿದೆ" ಎಂದು ತಿಳಿದ ನಂತರ ಶಿಂಧೆ ಅವರು ತೀವ್ರ "ಅಸಮಾಧಾನಗೊಂಡಿದ್ದಾರೆ" ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಅಠವಳೆ) ಅಧ್ಯಕ್ಷರು ಹೇಳಿದ್ದಾರೆ.

ಡೆಡ್ಲಾಕ್ ಇದೆ...ಬಿಜೆಪಿ ಹೈಕಮಾಂಡ್ ದೇವೇಂದ್ರ ಫಡ್ನವೀಸ್ ಅವರನ್ನು(ಮಹಾರಾಷ್ಟ್ರದ) ಸಿಎಂ ಆಗಿ ಅಂತಿಮಗೊಳಿಸಿದೆ ಎಂದು ತಿಳಿದ ಏಕನಾಥ್ ಶಿಂಧೆ ಅವರು ಸ್ವಲ್ಪ ಅಸಮಾಧಾನಗೊಂಡಿದ್ದಾರೆ. ಆದರೆ, ಬಿಜೆಪಿ 132 ಸ್ಥಾನಗಳನ್ನು ಪಡೆದಿದೆ. ಆದ್ದರಿಂದ ಅವರಿಗೆ ದಾರಿ ಮಾಡಿಕೊಡಬೇಕು ಎಂದು ನಾನು ಹೇಳುತ್ತೇನೆ ... ದೇವೇಂದ್ರ ಫಡ್ನವೀಸ್ ಅವರನ್ನು ಸಿಎಂ ಮಾಡಬೇಕು. ಶಿಂಧೆ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಬಹುದು,’’ ಎಂದು ಅಠವಳೆ ಹೇಳಿದ್ದಾರೆ.

ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಎಲ್ಲಾ ಮೂವರು ನಾಯಕರೊಂದಿಗೆ ಮಾತುಕತೆ ನಡೆಸಿ ಬಿಜೆಪಿ ಹೈಕಮಾಂಡ್ ಶೀಘ್ರದಲ್ಲೇ ಮುಂದಿನ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಠವಳೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.