ಪುರುಷರ ದಿನ: ಬರೀ ಟವೆಲ್ ಸುತ್ತಿಕೊಂಡು India Gate ಬಳಿ Dance ಮಾಡಿದ ಯುವತಿ, Video ವೈರಲ್
ಕೋಲ್ಕತ್ತಾ ಮೂಲದ ಮಾಡೆಲ್ ಸನ್ನತಿ ಮಿತ್ರಾ (sannati__) ಎಂಬಾಕೆ ದೆಹಲಿಯ ಪ್ರವಾಸಿ ತಾಣ ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿ ರೀಲ್ಸ್ ಮಾಡಿದ್ದಾರೆ.

ನವದೆಹಲಿ: ವಿಶ್ವ ಪುರುಷರ ದಿನದಂದು ಮಹಿಳಾ ರೂಪದರ್ಶಿಯೊಬ್ಬರು ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿಕೊಂಡು ನೃತ್ಯ ಮಾಡುವ ಮೂಲಕ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಮೂಲಗಳ ಪ್ರಕಾರ ಕೋಲ್ಕತ್ತಾ ಮೂಲದ ಮಾಡೆಲ್ ಸನ್ನತಿ ಮಿತ್ರಾ (sannati__) ಎಂಬಾಕೆ ದೆಹಲಿಯ ಪ್ರವಾಸಿ ತಾಣ ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿ ರೀಲ್ಸ್ ಮಾಡಿದ್ದಾರೆ.
ನಿನ್ನೆ ಅಂತಾರಾಷ್ಟ್ರೀಯ ಪುರುಷರ ದಿನದ ಅಂಗವಾಗಿ ಆಕೆ ಈ ರೀಲ್ಸ್ ಮಾಡಿದ್ದು, ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ.
ಅಲ್ಲದೆ ವಿಡಿಯೋದಲ್ಲಿ “ಅಂತರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸನ್ನತಿ ಒಂದು ಬಿಳಿ ಟವೆಲ್ ಸುತ್ತಿಕೊಂಡು ಡಾನ್ಸ್ ಮಾಡುವ ದೃಶ್ಯವನ್ನು ಕಾಣಬಹುದು. ಹಿಂದಿ ಹಾಡೊಂದಕ್ಕೆ ಲಿಪ್ ಸಿಂಕ್ ಮಾಡುತ್ತಾ ಡಾನ್ಸ್ ಮಾಡಿದ್ದಾಳೆ.
ವ್ಯಾಪಕ ಆಕ್ರೋಶ
ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಸಾರ್ವಜನಿಕ ಸ್ಥಳದಲ್ಲಿ ಆಕೆ ನಡೆದುಕೊಂಡ ರೀತಿಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.
ವಿಡಿಯೋ ವೈರಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ ಪರ-ವಿರೋಧ ಟೀಕೆಗಳು ವ್ಯಕ್ತವಾಗುತ್ತಿದ್ದು, ಒಬ್ಬ ಬಳಕೆದಾರರು 'ಮೊದಲು ಆಕೆಯನ್ನು ಅರೆಸ್ಟ್ ಮಾಡಿ' ಎಂದು ಕಿಡಿಕಾರಿದ್ದರೆ ಮತ್ತೋರ್ವ ಬಳಕೆದಾರರು 'ಆಕೆ ತನ್ನ ಎಲ್ಲಾ ಮಿತಿಗಳನ್ನು ಮೀರಿ ವರ್ತಿಸುತ್ತಿದ್ದಾಳೆ' ಟೀಕಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರಚಾರ ಮತ್ತು ಹೆಚ್ಚು ಫಾಲೋವರ್ಸ್ ಮತ್ತು ಲೈಕ್ ಗಳಿಗಾಗಿ ಕೆಲ ಕಟೆಂಟ್ ಕ್ರಿಯೇಟರ್ ಗಳು ಅಶ್ಲೀಲ ವಿಡಿಯೋಗಳನ್ನು ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ಮತ್ತೋರ್ವ ಬಳಕೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



