LokSabha Election 2024: ಲವ್ ಜಿಹಾದ್ ಶುರುವಾಗಿದ್ದೇ ಜಾರ್ಖಂಡ್ನಿಂದ!: JMM ವಿರುದ್ಧ ಪ್ರಧಾನಿ ಮೋದಿ
ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡದ್ದೇ ಜಾರ್ಖಂಡ್ನಿಂದ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ.

ರಾಂಚಿ: ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡದ್ದೇ ಜಾರ್ಖಂಡ್ನಿಂದ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ.
ಲೋಕಸಭಾ ಚುನಾವಣೆ (Lok Sabha Election 2024) ಕೊನೇ ಹಂತದ ಮತದಾದನ ಹಿನ್ನೆಲೆಯಲ್ಲಿ ಜಾರ್ಖಂಡ್ನಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಮ್ಎಮ್) ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಜಾರ್ಖಂಡ್ನ ದುಮ್ಕಾದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ''ಹಿಂದೂ ಧರ್ಮಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವ ‘ಲವ್ ಜಿಹಾದ್’ ಆರಂಭಗೊಂಡದ್ದೇ ಜಾರ್ಖಂಡ್ನಿಂದ.. ಜೆಎಂಎಂ ನಿರಂತರವಾಗಿ ಕೋಮುವಾದಿ ರಾಜಕೀಯದಲ್ಲಿ ತೊಡಗಿದೆ. ಜಾರ್ಖಂಡ್ ನ ಒಂದು ಜಿಲ್ಲೆಯಲ್ಲಿ ಭಾನುವಾರದ ಸಾಂಪ್ರದಾಯಿಕ ರಜಾದಿನವನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ.
ವಾಸ್ತವದಲ್ಲಿ ಭಾನುವಾರ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ... ಬದಲಿಗೆ ಅದು ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದ್ದಾಗಿದೆ. 200-300 ವರ್ಷಗಳಿಂದ ರಜಾದಿನವಾಗಿ ಪರಿಗಣಿಸಲಾಗಿದ್ದು, ಈಗ ಅದನ್ನು ಶುಕ್ರವಾರಕ್ಕೆ ಬದಲಾಯಿಸಲಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.
ಜೆಎಂಎಂ ಮತ್ತು ಕಾಂಗ್ರೆಸ್ ಮಿತಿಮೀರಿದ ಲೂಟಿಯಲ್ಲಿ ತೊಡಗಿವೆ ಎಂದು ಆರೋಪಿಸಿದರು, ಜಾರ್ಖಂಡ್ ರಾಜ್ಯದಲ್ಲಿ ಹಣದ ಶಿಖರಗಳು ನಿರ್ಮಾಣಗೊಂಡಿವೆ. ಜೆಎಂಎಂ-ಕಾಂಗ್ರೆಸ್ ವ್ಯಾಪಕ ಲೂಟಿಯಲ್ಲಿ ತೊಡಗಿದೆ ಎಂದು ಹೇಳಿದರು. ಜೂನ್ 4 ರ ನಂತರ ತಮ್ಮ ನೇತೃತ್ವದ ನೂತನ ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ತನ್ನ ಕ್ರಮ ತೀವ್ರಗೊಳಿಸುತ್ತದೆ ಎಂದು ಅವರು ಪ್ರತಿಜ್ಞೆ ಮಾಡಿದರು. ಅಲ್ಲದೆ 2014ಕ್ಕೂ ಮೊದಲು ಕಾಂಗ್ರೆಸ್ ದಿನದ 24 ಗಂಟೆಯೂ ಲೂಟಿಯಲ್ಲಿ ತೊಡಗಿದ್ದರಿಂದ ಹಗರಣಗಳು ಸಾಮಾನ್ಯವಾಗಿದ್ದವು, ಆದರೆ ತಾವು ಅಧಿಕಾರಕ್ಕೆ ಬಂದ ನಂತರ ಅದನ್ನು ನಿಲ್ಲಿಸಿಸಲಾಯಿತು ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ 'ಬಹುದೊಡ್ಡ ಶತ್ರು'; 2024ರ ಚುನಾವಣೆಯಲ್ಲಿ ಮೀಸಲಾತಿ ಮುಖ್ಯ ವಿಷಯ: ಪ್ರಧಾನಿ ಮೋದಿ
ಅಕ್ರಮ ನುಸುಳುಕೋರರಿಗೆ JMM ಬೆಂಬಲ
ಇದೇ ವೇಳೆ ಜಾರ್ಖಂಡ್ ನಲ್ಲಿ ವ್ಯಾಪಕವಾಗಿರುವ ಅಕ್ರಮ ನುಸುಳುಕೋರರ ವಿಚಾರವಾಗಿ ಮಾತನಾಡಿದ ಮೋದಿ, ''ಜಾರ್ಖಂಡ್ನಲ್ಲಿ ದೊಡ್ಡ ಬಿಕ್ಕಟ್ಟು ತಲೆದೋರಿದೆ. ಅದುವೇ ಒಳನುಸುಳುವಿಕೆ. ಅಕ್ರಮ ನುಸುಳುಕೋರರಿಂದಾಗಿ ಸಂತಾಲ್ ಪರಗಣಗಳಲ್ಲಿ ಬುಡಕಟ್ಟು ಜನಸಂಖ್ಯೆ ಕಡಿಮೆಯಾಗುತ್ತಿದೆ. ಜಾರ್ಖಂಡ್ನಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟವು “ನುಸುಳುಕೋರರನ್ನು ಪೋಷಿಸುತ್ತಿದೆ”.
ಬುಡಕಟ್ಟು ಜನರ ಭೂಮಿಯನ್ನು ನುಸುಳುಕೋರರು ವಶಪಡಿಸಿಕೊಳ್ಳುತ್ತಿದ್ದಾರೆ. ಅವರು ಮಹಿಳೆಯರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಸಂತಾಲ್ ಪರಗಣಗಳು ಒಳನುಸುಳುವಿಕೆಯ ಸವಾಲನ್ನು ಎದುರಿಸುತ್ತಿವೆ. ಅನೇಕ ಪ್ರದೇಶಗಳಲ್ಲಿ, ಬುಡಕಟ್ಟು ಜನರ ಜನಸಂಖ್ಯೆ ವೇಗವಾಗಿ ಕುಸಿಯುತ್ತಿದೆ ಮತ್ತು ಒಳನುಸುಳುವವರ ಸಂಖ್ಯೆ ಹೆಚ್ಚುತ್ತಿದೆ. ನುಸುಳುಕೋರರು ಬುಡಕಟ್ಟು ಜನರ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಬುಡಕಟ್ಟು ಹೆಣ್ಣುಮಕ್ಕಳು ನುಸುಳುಕೋರರ ದಾಳಿಗೆ ಗುರಿಯಾಗಿದ್ದಾರೆ. ಅವರ ಭದ್ರತೆ ಮತ್ತು ಸುರಕ್ಷತೆ ಅಪಾಯದಲ್ಲಿದೆ. ಅವರ ಜೀವವೂ ಅಪಾಯದಲ್ಲಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


