ದೇಶ

ಗೋವಾ ಏರ್ ಪೋರ್ಟ್ ರನ್ ವೇ ಗೆ ಸಿಡಿಲು ಬಡಿದು ಹಾನಿ; 6 ವಿಮಾನಗಳ ಮಾರ್ಗ ಬದಲು!

ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (MIA) ರನ್ ವೇ ಗೆ ಸಿಡಿಲು ಬಡಿದ ಪರಿಣಾಮ 6 ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಗೋವಾ ಏರ್ ಪೋರ್ಟ್ ರನ್ ವೇ ಗೆ ಸಿಡಿಲು ಬಡಿದು ಹಾನಿ; 6 ವಿಮಾನಗಳ ಮಾರ್ಗ ಬದಲು!
ಗೋವಾ ವಿಮಾನ ನಿಲ್ದಾಣ — online desk
Published On :

ಪಣಜಿ: ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (MIA) ರನ್ ವೇ ಗೆ ಸಿಡಿಲು ಬಡಿದ ಪರಿಣಾಮ 6 ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ಸಿಡಿಲು ಬಡಿದ ಪರಿಣಾಮ ರನ್ ವೇ ಅಂಚಿನ ದೀಪಗಳಿಗೆ ಹಾನಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಗೋವಾದಲ್ಲಿರುವ ಮೋಪಾದಲ್ಲಿನ ವಿಮಾನ ನಿಲ್ದಾಣಕ್ಕೆ ಸಿಡಿಲು ಬಡಿದು ಈ ಘಟನೆ ನಡೆದಿದೆ ಎಂದು ಎಂಐಎ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಂಐಎ ಎನ್ಒಟಿಎಎಂ (ನೊಟೀಸ್ ಟು ಏರ್ ಮನ್) ಪ್ರಕ್ರಿಯೆ ಕೈಗೊಂಡು ಸಮಸ್ಯೆಯನ್ನು ದುರಸ್ತಿ ಮಾಡಿದ್ದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ದುರಸ್ತಿ ಹಿನ್ನೆಲೆಯಲ್ಲಿ 6 ವಿಮಾನಗಳನ್ನು ಹತ್ತಿರದ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಇಂತಹ ನೈಸರ್ಗಿಕ ವಿಕೋಪಗಳು ಮಾನವ ನಿಯಂತ್ರಣವನ್ನು ಮೀರಿವೆ" ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ. MIA ಹೊರತುಪಡಿಸಿ, ಕರಾವಳಿ ರಾಜ್ಯವು ದಕ್ಷಿಣ ಗೋವಾದ ದಾಬೋಲಿಮ್‌ನಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.