ಸ್ವಾತಿ ಮಲಿವಾಲ್ ಕಾಲು, ಕೆನ್ನೆಗೆ ಗಾಯ: ವೈದ್ಯಕೀಯ ವರದಿಯಲ್ಲಿ ಬಹಿರಂಗ!
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರಿಂದ ಹಲ್ಲೆ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಎಡಗಾಲು ಮತ್ತು ಬಲ ಕೆನ್ನೆಯ ಮೇಲೆ ಮೂಗೇಟುಗಳಿವೆ ಎಂದು ಅವರ ವೈದ್ಯಕೀಯ ವರದಿ ತಿಳಿಸಿದೆ.

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರಿಂದ ಹಲ್ಲೆ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ಅವರ ಎಡಗಾಲು ಮತ್ತು ಬಲ ಕೆನ್ನೆಯ ಮೇಲೆ ಮೂಗೇಟುಗಳಿವೆ ಎಂದು ಅವರ ವೈದ್ಯಕೀಯ ವರದಿ ತಿಳಿಸಿದೆ.
ಸೋಮವಾರ ಸಿಎಂ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಕುಮಾರ್ ವಿರುದ್ಧ ಮಲಿವಾಲ್ ಎಫ್‌ಐಆರ್ ದಾಖಲಿಸಿದ್ದಾರೆ. ಕುಮಾರ್ ತನ್ನ ಮೇಲೆ ಮತ್ತೆ ಮತ್ತೆ ಪೂರ್ಣ ಬಲದಿಂದ ಹೊಡೆದಿದ್ದಾನೆ ಮತ್ತು ಆಕೆಗೆ "ಏಳರಿಂದ ಎಂಟು ಬಾರಿ ಒದೆದು, ಕಪಾಳ ಮೋಕ್ಷ ಮಾಡಿರುವುದಾಗಿ ಮಲಿವಾಲ್ ಹೇಳಿದ್ದಾರೆ.
ಶುಕ್ರವಾರ ಮಲಿವಾಲ್ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. AIIMS ನಿಂದ ಮಾಡಿದ ಅವರ ವೈದ್ಯಕೀಯ-ಕಾನೂನು ಪ್ರಮಾಣಪತ್ರದ ಪ್ರಕಾರ, ಮಲಿವಾಲ್ ಅವರ ಎಡಗಾಲಿನಲ್ಲಿ ಸರಿ ಸುಮಾರು 3x2 cm ಗಾತ್ರದ ಮೂಗೇಟು ಆಗಿದ್ದರೆ, ಅವರ ಬಲ ಕೆನ್ನೆಯಲ್ಲಿ 2x2 cm ಗಾತ್ರದ ಗಾಯವಾಗಿರುವುದಾಗಿ ಹೇಳಲಾಗಿದೆ.

ಸ್ವಾತಿ ಮಲಿವಾಲ್ ನನ್ನನ್ನು ಅವಾಚ್ಯವಾಗಿ ನಿಂದಿಸಿದ್ದಾರೆ: ಪ್ರತಿ ದೂರು ದಾಖಲಿಸಿದ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


