ಕೇಜ್ರಿವಾಲ್ 'ಭ್ರಷ್ಟಾಚಾರದ ಪೋಸ್ಟರ್ ಬಾಯ್': ತೇಜಸ್ವಿ ಸೂರ್ಯ
ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು "ಭ್ರಷ್ಟಾಚಾರದ ಪೋಸ್ಟರ್ ಬಾಯ್" ಎಂದು ಕರೆದಿದ್ದಾರೆ. ಅವರಿಗೆ ಭ್ರಷ್ಟಾಚಾರ ಅಥವಾ ಪಾರದರ್ಶಕತೆಯ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು "ಭ್ರಷ್ಟಾಚಾರದ ಪೋಸ್ಟರ್ ಬಾಯ್" ಎಂದು ಕರೆದಿದ್ದಾರೆ. ಅವರಿಗೆ ಭ್ರಷ್ಟಾಚಾರ ಅಥವಾ ಪಾರದರ್ಶಕತೆಯ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೇಲ್ವಾಲ್ ಪರ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿ ಸೂರ್ಯ, ಕೇಜ್ರಿವಾಲ್ ಅವರಿಗೆ ವಿಶ್ವಾಸಾರ್ಹತೆ ಉಳಿದಿದೆ ಎಂದು ಭಾವಿಸುತ್ತೀರಾ? ಅವರು ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಯೂ -ಟರ್ನ್ ತೆಗೆದುಕೊಂಡಿದ್ದಾರೆ. 2013ರ ಅಣ್ಣಾ ಹಜಾರೆ ಚಳವಳಿಯಲ್ಲಿ ನಮ್ಮಂತಹ ಅನೇಕ ಯುವ ಜನತೆ ಪಾಲ್ಗೊಂಡಿದ್ದರು. ಅದನ್ನು ಭ್ರಷ್ಟಾಚಾರ ವಿರುದ್ಧದ ರಾಜಕೀಯಯೇತರ ಚಳವಳಿ ಅಂದುಕೊಂಡಿದ್ದರು."ಅಲ್ಲಿಂದ ಇಲ್ಲಿಯವರೆಗೆ, ಕೇಜ್ರಿವಾಲ್ ಪ್ರಸ್ತುತಪಡಿಸಿದ ಕಲ್ಪನೆಯನ್ನು ನಂಬಿದ ಎಲ್ಲರಿಗೂ ಮೋಸ ಮಾಡಿದ್ದಾರೆ. ಅವರು ಬಹಿರಂಗವಾಗಿ ಟೀಕಿಸಿದ್ದ ಲಾಲು ಯಾದವ್, ಮಮತಾ ಬ್ಯಾನರ್ಜಿ, ಶರದ್ ಪವಾರ್, ಉದ್ಧವ್ ಠಾಕ್ರೆ ಮುಂತಾದವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ" ಎಂದು ಕಿಡಿಕಾರಿದರು.
ಪಾರದರ್ಶಕತೆ ಮತ್ತು ಸ್ವಚ್ಛ ಆಡಳಿತದ ಭರವಸೆಯೊಂದಿಗೆ ಜನರಿಗೆ ಹತ್ತಿರವಾದ ಕೇಜ್ರಿವಾಲ್ ಈಗ ಅನೇಕ ಆರೋಪಗಳಲ್ಲಿ ಜೈಲಿನಲ್ಲಿದ್ದಾರೆ. ''ದೇಶದಲ್ಲಿ ಬೂಟಾಟಿಕೆಗೆ ಒಂದು ಮುಖವಿದ್ದರೆ ಅದು ಕೇಜ್ರಿವಾಲ್, ಯು-ಟರ್ನ್ ಮತ್ತು ಅನೈತಿಕ ರಾಜಕಾರಣಕ್ಕೆ ಒಂದು ಮುಖವಿದ್ದರೆ ಅದು ಕೇಜ್ರಿವಾಲ್ ಆಗಿರಬಹುದು, ದೇಶದ ಜನರು ಈ ದ್ವಂದ್ವ ನೀತಿಯನ್ನು ನೋಡಿದ್ದಾರೆ. ಜೂನ್ 4 ರಂದು ನಡೆಯಲಿರುವ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಸ್ಥಾನಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



