ದೇಶ

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಇನ್ನಿಲ್ಲ

ರಾಮಕೃಷ್ಣ ಮಿಷನ್ ನ ಸ್ವಾಮಿ ಸ್ಮರಣಾನಂದ (95) ಇಂದು ಇಹಲೋಕ ತ್ಯಜಿಸಿದ್ದಾರೆ.

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಇನ್ನಿಲ್ಲ
ಸ್ವಾಮಿ ಸ್ಮರಣಾನಂದ — TNIE
Published On :

ಕೋಲ್ಕತ್ತ: ರಾಮಕೃಷ್ಣ ಮಿಷನ್ ನ ಸ್ವಾಮಿ ಸ್ಮರಣಾನಂದ (95) ಇಂದು ಇಹಲೋಕ ತ್ಯಜಿಸಿದ್ದಾರೆ. 2017 ರಲ್ಲಿ ರಾಮಕೃಷ್ಣ ಮಿಷನ್ ಗೆ 16 ನೇ ಅಧ್ಯಕ್ಷರಾಗಿ ಸ್ಮರಣಾನಂದ ನಿಯುಕ್ತರಾಗಿದ್ದರು.

ಶ್ರೀಮದ್ ಸ್ವಾಮಿ ಸ್ಮರಣಾನಂದ ಜಿ ಮಹಾರಾಜರು, ಅಧ್ಯಕ್ಷರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಇಂದು ರಾತ್ರಿ 8:14 ರ ವೇಳೆಗೆ ಮಹಾಸಮಾಧಿ ಹೊಂದಿದ್ದಾರೆ ಎಂದು ಮಠ ಹೇಳಿಕೆಯಲ್ಲಿ ತಿಳಿಸಿದೆ.

ಸ್ಮರಣಾನಂದ ಸ್ವಾಮಿ ಅವರನ್ನು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಕ್ಕೆ ಜ.29 ರಂದು ದಾಖಲಿಸಲಾಗಿತ್ತು, ಮೂತ್ರನಾಳದ ಸೋಂಕಿನಿಂದ ಅವರು ಬಳಲುತ್ತಿದ್ದರು. ನಂತರ ಅವರಿಗೆ ಉಸಿರಾಟದ ವೈಫಲ್ಯ ಎದುರಾಗಿತ್ತು. ಅದಕ್ಕಾಗಿ ಅವರನ್ನು ಮಾರ್ಚ್ 3 ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.