ತೆಲಂಗಾಣದ ಅಭಿವೃದ್ಧಿಯ ಕನಸುಗಳನ್ನು ಕಾಂಗ್ರೆಸ್, ಬಿಆರ್‌ಎಸ್ ಭಗ್ನಗೊಳಿಸಿವೆ: ಪ್ರಧಾನಿ ಮೋದಿ
ನಾಗರಕರ್ನೂಲ್‌ನಲ್ಲಿ ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಅದೇ ಬದಲಾವಣೆಯನ್ನು ನಾವೆಲ್ಲ ಸೇರಿ ತೆಲಂಗಾಣದಲ್ಲೂ ತರಬೇಕಿದೆ ಎಂದರು.

ಹೈದರಾಬಾದ್: ತೆಲಂಗಾಣ ಅಭಿವೃದ್ಧಿಯ ಪ್ರತಿ ಕನಸನ್ನು ಕಾಂಗ್ರೆಸ್ ಮತ್ತು ಬಿಆರ್ ಎಸ್ ಪಕ್ಷಗಳು ನುಚ್ಚುನೂರು ಮಾಡಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ನಾಗರಕರ್ನೂಲ್‌ನಲ್ಲಿ ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಅದೇ ಬದಲಾವಣೆಯನ್ನು ನಾವೆಲ್ಲ ಸೇರಿ ತೆಲಂಗಾಣದಲ್ಲೂ ತರಬೇಕಿದೆ ಎಂದರು.
ಕಾಂಗ್ರೆಸ್ ಮತ್ತು ಬಿಆರ್‌ಎಸ್ ಒಟ್ಟಾಗಿ ತೆಲಂಗಾಣದ ಅಭಿವೃದ್ಧಿಯ ಪ್ರತಿಯೊಂದು ಕನಸನ್ನು ಭಗ್ನಗೊಳಿಸಿದೆ, ತೆಲಂಗಾಣ ಜನರು ಮೂರನೇ ಬಾರಿಗೆ ಮೋದಿಯನ್ನು ಮರಳಿ ತರಲು ನಿರ್ಧರಿಸಿದ್ದಾರೆ ಎಂಬುದನ್ನು ಇಂದು ಇಲ್ಲಿನ ಜನರಲ್ಲಿ ನೋಡುತ್ತಿದ್ದೇನೆ" ಎಂದರು.
ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಜನರು ಎನ್‌ಡಿಎ 400 ಸ್ಥಾನಗಳನ್ನು ದಾಟುವ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ, ಪಕ್ಷವು 'ಗರೀಬಿ ಹಟಾವೋ' ಘೋಷಣೆಯನ್ನು ನೀಡಿದೆ.ಹಾಗಾದರೆ ಬಡವರ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



