ದೇಶ

ಗುಜರಾತ್: ಪರೀಕ್ಷೆಗೂ ಮುನ್ನ ಹಿಜಾಬ್ ತೆಗೆಯಲು 10ನೇ ತರಗತಿ ಬಾಲಕಿಯರಿಗೆ ಒತ್ತಾಯ, ಶಾಲೆಯ ಪ್ರಾಂಶುಪಾಲ ವಜಾ

ಹತ್ತನೇ ತರಗತಿ ಪರೀಕ್ಷೆಗೂ ಮುನ್ನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದಕ್ಕೆ ಪೋಷಕರ ಆಕ್ರೋಶ ಭುಗಿಲೆದ್ದ ನಂತರ ಗುಜರಾತ್ ಶಿಕ್ಷಣ ಇಲಾಖೆ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರನ್ನು ಪರೀಕ್ಷಾ ನಿರ್ವಾಹಕ ಹುದ್ದೆಯಿಂದ ಗುರುವಾರ ವಜಾಗೊಳಿಸಿದೆ.


ಗುಜರಾತ್: ಪರೀಕ್ಷೆಗೂ ಮುನ್ನ ಹಿಜಾಬ್ ತೆಗೆಯಲು 10ನೇ ತರಗತಿ ಬಾಲಕಿಯರಿಗೆ ಒತ್ತಾಯ, ಶಾಲೆಯ ಪ್ರಾಂಶುಪಾಲ ವಜಾ
ಸಾಂದರ್ಭಿಕ ಚಿತ್ರ
Published On :

ಭರೂಚ್: ಹತ್ತನೇ ತರಗತಿ ಪರೀಕ್ಷೆಗೂ ಮುನ್ನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯುವಂತೆ ಒತ್ತಾಯಿಸಿದ್ದಕ್ಕೆ ಪೋಷಕರ ಆಕ್ರೋಶ ಭುಗಿಲೆದ್ದ ನಂತರ ಗುಜರಾತ್ ಶಿಕ್ಷಣ ಇಲಾಖೆ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರನ್ನು ಪರೀಕ್ಷಾ ನಿರ್ವಾಹಕ ಹುದ್ದೆಯಿಂದ ಗುರುವಾರ ವಜಾಗೊಳಿಸಿದೆ. ಗುಜರಾತ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ಬೋರ್ಡ್ ನ (ಜಿಎಸ್‌ಎಚ್‌ಎಸ್‌ಇಬಿ) ಗಣಿತ ಪತ್ರಿಕೆಯ ಮೊದಲು ಭರೂಚ್ ಜಿಲ್ಲೆಯ ಅಂಕಲೇಶ್ವರ ಪಟ್ಟಣದ ಲಯನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಪೋಷಕರ ದೂರಿನ ನಂತರ, ಶಾಲೆಯ ಪ್ರಾಂಶುಪಾಲರೂ ಆಗಿರುವ ಪರೀಕ್ಷಾ ಕೇಂದ್ರದ ನಿರ್ವಾಹಕರಾದ ಇಲಾಬೆನ್ ಸುರತಿಯಾ ಅವರನ್ನು ರಾಜ್ಯ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ನಿರ್ವಾಹಕ ಹುದ್ದೆಯಿಂದ ವಜಾಗೊಳಿಸಿದೆ. ಜಿಲ್ಲಾ ಶಿಕ್ಷಣಾಧಿಕಾರಿ ಸ್ವಾತಿ ರಾವ್ ಪೋಷಕರೊಂದಿಗೆ ಸಭೆ ನಡೆಸಿದ ನಂತರ ಈ ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದೇನೆ. ಈ ಸಂಬಂಧ ಪೋಷಕರು ಕೂಡಾ ಅರ್ಜಿ ಸಲ್ಲಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರದ ನಿರ್ವಾಹಕರನ್ನು ಬದಲಾಯಿಸುವ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ರವೋಲ್ ತಿಳಿಸಿದರು.

ಪರೀಕ್ಷೆಯ ಮೊದಲು ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕುವಂತೆ ಶಾಲಾ ಸಿಬ್ಬಂದಿಯಿಂದ ಹೇಗೆ ಒತ್ತಡ ಹೇರಲಾಯಿತು ಎಂದು ಪೋಷಕರು ವಿವರಿಸಿದರು. ಈ ಮಧ್ಯೆ ಪರೀಕ್ಷೆಗೆ ಯಾವುದೇ ನಿರ್ದಿಷ್ಟ ಸಮವಸ್ತ್ರವನ್ನು ನಿಗದಿಪಡಿಸಿಲ್ಲ, ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಯಾವುದೇ ವಾದ ಸಭ್ಯ ಉಡುಪುಗಳನ್ನು ಧರಿಸಬಹುದು ಎಂದು ಬೋರ್ಡ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.