ದೇಶ

Video: ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು, ''ಬಟ್ಟೆ ಬಿಚ್ಚಿ Payment ಆಯ್ತು ಎಂದ ಯುವತಿ'', ವಿಡಿಯೋ ವೈರಲ್!

ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡ ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ದೆಹಲಿಯಲ್ಲಿ ಈ ಘಟನೆ ನಡೆದಿದೆ.

Video: ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು, ''ಬಟ್ಟೆ ಬಿಚ್ಚಿ Payment ಆಯ್ತು ಎಂದ ಯುವತಿ'', ವಿಡಿಯೋ ವೈರಲ್!
ಬಟ್ಟೆ ಬಿಚ್ಚಿ Payment ಆಯ್ತು ಎಂದ ಯುವತಿ
Published On :

ನವದೆಹಲಿ: ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡು ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ವರದಿಯಾಗಿದೆ.

ಹೌದು.. ದೆಹಲಿ ಮೆಟ್ರೋ ರೈಲಿನಲ್ಲಿ ಯುವತಿಯರ ಅಸಭ್ಯ ವರ್ತನೆಗಳು ವರದಿಯಾಗುತ್ತಿರುವಂತೆಯೇ ಇತ್ತ ದೆಹಲಿ ಪೆಟ್ರೋಲ್ ಬಂಕ್ ನಲ್ಲೂ ಅಂತಹುದೇ ಘಟನೆ ವರದಿಯಾಗಿದೆ.

ಪೆಟ್ರೋಲ್ ಬಂಕ್ ವೊಂದರಲ್ಲಿ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡ ಯುವತಿಯರ ಗ್ಯಾಂಗ್ ವೊಂದು ಬಳಿಕ ಹಣ ನೀಡಿ ಎಂದ ಸಿಬ್ಬಂದಿಗೆ ಬಟ್ಟೆ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿರುವ ಘಟನೆ ದೆಹಲಿಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಬಂಕ್ ನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.

ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ಯುವತಿಯರ ತಂಡ ಮೊದಲು ಗಾಡಿಗೆ ಪೆಟ್ರೋಲ್ ತುಂಬಿಸಿಕೊಂಡಿದೆ. ಬಳಿಕ ಸಿಬ್ಬಂದಿ ಹಣ ಕೇಳಿದ್ದು ಯುವತಿ UPI ಮೂಲಕ ಪೇಮೆಂಟ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೇಮೆಂಟ್ ಫೇಲ್ ಆಗಿದ್ದು, ಸಿಬ್ಬಂದಿ ಕ್ಯಾಶ್ ನೀಡುವಂತೆ ಕೇಳಿದ್ದಾರೆ. ತಮ್ಮ ಬಳಿ ಕ್ಯಾಶ್ ಇಲ್ಲ ಎಂದು ಹೇಳಿದೆ. ಈ ವೇಳೆ ಸಿಬ್ಬಂದಿ ಹಣ ನೀಡಿ ಎಂದಾಗ ಕೆಲ ಹೊತ್ತು ಯುವತಿಯರು ವಾಗ್ವಾದ ನಡೆಸಿದ್ದಾರೆ.

ಸಿಬ್ಬಂದಿ ತಮ್ಮ ಬಂಕ್ ಮ್ಯಾನೇಜರ್ ತೋರಿಸಿ ಅವರಿಗೆ ಹೇಳಿ ಎಂದು ಹೇಳಿದ್ದಾರೆ. ಈ ವೇಳೆ ಗಾಡಿಯ ಮುಂಭಾಗದಲ್ಲಿದ್ದ ಯುವತಿ ಏಕಾಏಕಿ ಗಾಡಿಯಿಂದ ಇಳಿದು ತನ್ನ ಪ್ಯಾಂಟ್ ಬಿಚ್ಚಿ ಪೇಮೆಂಟ್ ಆಯ್ತು ಎಂದು ಹೇಳಿ ಅಲ್ಲಿಂದ ಹೋಗಲು ಯತ್ನಿಸಿದ್ದಾರೆ.

ಇವಿಷ್ಟೂ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಯುವತಿಯರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.