ಕನ್ಯಾಕುಮಾರಿ: 'ಸೂರ್ಯ ಅರ್ಘ್ಯ' ನೀಡುವ ಮೂಲಕ ಎರಡನೇ ದಿನದ ಧ್ಯಾನ ಆರಂಭಿಸಿದ ಪ್ರಧಾನಿ ಮೋದಿ
ಇಲ್ಲಿನ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಇಂದು ಶನಿವಾರ ಸೂರ್ಯೋದಯದ ವೇಳೆ ‘ಸೂರ್ಯ ಅರ್ಘ್ಯ’ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಮತ್ತು ಅಂತಿಮ ದಿನದ ಧ್ಯಾನವನ್ನು ಆರಂಭಿಸಿದರು.

ಕನ್ಯಾಕುಮಾರಿ: ಇಲ್ಲಿನ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಇಂದು ಶನಿವಾರ ಸೂರ್ಯೋದಯದ ವೇಳೆ ‘ಸೂರ್ಯ ಅರ್ಘ್ಯ’ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಮತ್ತು ಅಂತಿಮ ದಿನದ ಧ್ಯಾನವನ್ನು ಆರಂಭಿಸಿದರು.
ಪ್ರಧಾನಿ ಮೋದಿ ಅವರು 'ಸೂರ್ಯ ಅರ್ಘ್ಯ'ವನ್ನು ನೀಡಿ ಸರ್ವಶಕ್ತನಿಗೆ ನಮಸ್ಕಾರಗಳನ್ನು ಮಾಡುವ ಮೂಲಕ ಆಧ್ಯಾತ್ಮಕ ಆಚರಣೆಯನ್ನು ಆರಂಭಿಸಿದರು. ಸಾಂಪ್ರದಾಯಿಕವಾಗಿ ತಾಮ್ರದ ಚೆಂಬಿನ ಪಾತ್ರೆಯ ಮೂಲಕ ಸ್ವಲ್ಪ ನೀರನ್ನು ಸಮುದ್ರಕ್ಕೆ ನೈವೇದ್ಯವಾಗಿ (ಅರ್ಘ್ಯ) ಸುರಿದು ಪ್ರಾರ್ಥನಾ ಮಣಿ ಅಂದರೆ ಜಪ ಮಾಲೆ ಕೈಯಲ್ಲಿ ಹಿಡಿದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮೋದಿ ಅವರು ಕೇಸರಿ ವಸ್ತ್ರವನ್ನು ಧರಿಸಿದ್ದರು. ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಕೈಯಲ್ಲಿ 'ಜಪ ಮಾಲೆ' ಹಿಡಿದುಕೊಂಡು ಮಂಟಪದ ಸುತ್ತಲೂ ನಡೆದರು.
ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ಸ್ಮಾರಕವು ತೀರದ ಸಮೀಪವಿರುವ ಒಂದು ಸಣ್ಣ ದ್ವೀಪದಲ್ಲಿದೆ.
ವಿವೇಕಾನಂದ ಶಿಲಾ ಸ್ಮಾರಕದಲ್ಲಿ, ಪ್ರಧಾನಮಂತ್ರಿಯವರು ಮೊನ್ನೆ ಮೇ 30 ರ ಸಂಜೆ ಧ್ಯಾನವನ್ನು ಪ್ರಾರಂಭಿಸಿದ್ದರು. ಇಂದು ಸಂಜೆ ಸೂರ್ಯಾಸ್ತ ಬಳಿಕ ಪೂರ್ಣಗೊಳಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



