ಇನ್ನು ಮುಂದೆ ಹಸುಗಳಿಗೆ 'ಬಿಡಾಡಿ ದನ' ಎಂದು ಕರೆಯುವಂತಿಲ್ಲ: ರಾಜಸ್ಥಾನ ಸಚಿವ
ಇನ್ನು ಮುಂದೆ ಬಿಡಾಡಿ ದನಗಳಿಗೆ 'ನಿರಾಶ್ರಿತ್' (ನಿರ್ಗತಿಕ) ಪದವನ್ನು ಬಳಸಲಾಗುವುದು ಎಂದು ಪಶುಸಂಗೋಪನೆ ಮತ್ತು ಡೈರಿ ಸಚಿವ ಜೋರಾರಾಮ್ ಕುಮಾವತ್ ಹೇಳಿದರು.

ಜೈಪುರ: ರಾಜಸ್ಥಾನದಲ್ಲಿ ಇನ್ನು ಮುಂದೆ ಹಸುಗಳಿಗೆ 'ಬಿಡಾಡಿ ದನ' ಎಂಬ ಪದವನ್ನು ಬಳಸುವಂತಿಲ್ಲ ಎಂದು ಪಶುಸಂಗೋಪನೆ ಮತ್ತು ಡೈರಿ ಸಚಿವ ಜೋರಾರಾಮ್ ಕುಮಾವತ್ ಅವರು ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಬುಧವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅನುದಾನದ ಬೇಡಿಕೆಯ ಮೇಲಿನ ಚರ್ಚೆಗೆ ಉತ್ತರಿಸಿದ ಕುಮಾವತ್ ಅವರು, ಇನ್ನು ಮುಂದೆ ಬಿಡಾಡಿ ದನಗಳಿಗೆ 'ನಿರಾಶ್ರಿತ್' (ನಿರ್ಗತಿಕ) ಪದವನ್ನು ಬಳಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಮೌಲ್ಯಯುತ ಪಶು ಸಂಪತ್ತನ್ನು ಅಭಿವೃದ್ಧಿಪಡಿಸಿ ಜಾನುವಾರುಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಪಶುಪಾಲಕರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಗೋವು ಮತ್ತು ಗೂಳಿಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಸರ್ಕಾರ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಹೇಳಿದರು.
ಚರ್ಚೆಯ ನಂತರ ವಿಧಾನಸಭೆಯು ಧ್ವನಿ ಮತದ ಮೂಲಕ ಇಲಾಖೆಯ ಅನುದಾನ ಬೇಡಿಕೆಗಳನ್ನು ಅಂಗೀಕರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


