ದೇಶ

ಮಾಧ್ಯಮಗಳ ಮುಂದೆ ಕೈ ಮುಗಿದು 'ಸಾರಿ' ಎಂದ ನೀತಾ ಅಂಬಾನಿ: ಕಾರಣವೇನು..?

ಮದುವೆ ಬಂದು ಹಾರೈಸಿದಕ್ಕೆ, ತುಂಬಾ ತಾಳ್ಮೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಮಾಧ್ಯಮಗಳ ಮುಂದೆ ಕೈ ಮುಗಿದು 'ಸಾರಿ' ಎಂದ ನೀತಾ ಅಂಬಾನಿ: ಕಾರಣವೇನು..?
ನೀತಾ ಅಂಬಾನಿ
Published On :

ಕಳೆದ ಕೆಲ ತಿಂಗಳುಗಳಿಂದ ಸದ್ದು ಮಾಡುತ್ತಿದ್ದ ಮುಕೇಶ್​ ಅಂಬಾನಿ ಪುತ್ರ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ನಿರ್ವಿಘ್ನವಾಗಿ ನೆರವೇರಿದೆ.

ಕಳೆದೆರಡು ತಿಂಗಳುಗಳಿಂದ ಈ ಜೋಡಿಯ ನಿಶ್ಚಿತಾರ್ಥ, ಪ್ರೀ ವೆಡ್ಡಿಂಗ್​ ಮತ್ತು ವಿವಾಹದ ಸಮಾರಂಭಗಳು ಇಡೀ ಪ್ರಪಂಚದಾದ್ಯಂತ ಸದ್ದು ಮಾಡಿವೆ. ದೇಶ-ವಿದೇಶಗಳ ಗಣ್ಯಾತಿಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಒಂದೊಂದೇ ವೈರಲ್​ ಆಗುತ್ತಿವೆ.

ಇದರ ಬೆನ್ನಲ್ಲೇ ನೀತಾ ಅಂಬಾನಿ ಮಾಧ್ಯಮಕ್ಕೆ ಕ್ಷಮೆಯಾಚಿಸಿದ್ದಾರೆ. ಮದುವೆ ಬಂದು ಹಾರೈಸಿದಕ್ಕೆ, ತುಂಬಾ ತಾಳ್ಮೆಯಿಂದ ಕಾರ್ಯಕ್ರಮಕ್ಕೆ ಹಾಜರಿ ಹಾಕಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಈ ಮದುವೆ ಸಂದರ್ಭದಲ್ಲಿ ಏನಾದರೂ, ಯಾರಿಗಾದರೂ ಕಷ್ಟ ಆಗಿದ್ದರೆ ಕ್ಷಮೆ ಕೋರುತ್ತೇನೆ. ಇದು ಮದುವೆ ಮನೆ, ಏನಾದರೂ ತೊಂದರೆ ಆಗಿರಬಹುದು. ಹೀಗೆ ಏನಾದರೂ ಆಗಿದ್ದರೆ ಕ್ಷಮಿಸಿಬಿಡಿ. ಈಗಾಗಲೇ ನೀವು ಮದುವೆಗೆ ಬಂದು ಕಳೆ ಹೆಚ್ಚಿಸಿದ್ದೀರಿ ಎಂದು ತಿಳಿಸಿದ್ದಾರೆ.

ವಿವಾಹೋತ್ತರ ಕಾರ್ಯಕ್ರಮಗಳು ಇನ್ನೂ ಜಾರಿಯಲ್ಲಿದೆ. ಅವುಗಳಿಗೂ ನೀವು ಬಂದು ಶುಭಹಾರೈಸಬೇಕು ಎಂದು ಹೇಳಿದ್ದಾರೆ.

ಹಲವು ವರ್ಷಗಳ ಪ್ರೀತಿಗೆ ಅನಂತ್ ಮತ್ತು ರಾಧಿಕಾ ಜು.12ರಂದು ಮದುವೆಯ ಮುದ್ರೆ ಒತ್ತಿದ್ದಾರೆ. ಈ ವಿವಾಹದಲ್ಲಿ ಯಶ್ ದಂಪತಿ, ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ ದಂಪತಿ, ರಜನಿಕಾಂತ್, ಬಿಗ್ ಬಿ ಫ್ಯಾಮಿಲಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.