ದೇಶ

ಬಾಬಾ ರಾಮ್ ದೇವ್ ಗೆ ಮತ್ತೊಂದು ಆಘಾತ: ನೋಯ್ಡಾದಲ್ಲಿ Patanjali, ದಿವ್ಯ ಫಾರ್ಮಸಿಯ 14 ಔಷಧಗಳ ನಿಷೇಧ

ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 15 ರಂದು ಪತಂಜಲಿ ಆಯುರ್ವೇದ್ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.

ಬಾಬಾ ರಾಮ್ ದೇವ್ ಗೆ ಮತ್ತೊಂದು ಆಘಾತ: ನೋಯ್ಡಾದಲ್ಲಿ Patanjali, ದಿವ್ಯ ಫಾರ್ಮಸಿಯ 14 ಔಷಧಗಳ ನಿಷೇಧ
ಬಾಬಾ ರಾಮ್ ದೇವ್ ರ ಪತಂಜಲಿ ಸಂಸ್ಥೆ (ಸಾಂದರ್ಭಿಕ ಚಿತ್ರ)
Published On :

ನೋಯ್ಡಾ: ಯೋಗಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಗೆ ಮತ್ತೊಂದು ಆಘಾತ ಎದುರಾಗಿದ್ದು, ದಿವ್ಯಾ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್ ತಯಾರಿಸಿದ 14 ಆಯುರ್ವೇದ ಔಷಧಿಗಳ ಮಾರಾಟವನ್ನು ಗೌತಮ್ ಬುದ್ಧ ನಗರ (ನೋಯ್ಡಾ) ಆಡಳಿತವು ನಿಷೇಧಿಸಿದೆ.

ಯೋಗ ಗುರು ರಾಮ್ ದೇವ್ ಸ್ಥಾಪಿಸಿದ ಪತಂಜಲಿ ಆಯುರ್ವೇದ್ ಲಿಮಿಟೆಡ್‌ಗೆ ಸುಪ್ರೀಂ ಕೋರ್ಟ್ ಜುಲೈ 9 ರಂದು ತನ್ನ 14 ಉತ್ಪನ್ನಗಳ ಜಾಹೀರಾತುಗಳನ್ನು ಅಂದರೆ ಉತ್ಪಾದನಾ ಪರವಾನಗಿಗಳನ್ನು ಆರಂಭದಲ್ಲಿ ಅಮಾನತುಗೊಳಿಸಿ ಬಳಿಕ ಮರುಸ್ಥಾಪಿಸಿದ ಉತ್ಪನ್ನಗಳ ಜಾಹಿರಾತು ಕುರಿತು ಅಫಿಡವಿಟ್ ಸಲ್ಲಿಸಲು ನಿರ್ದೇಶಿಸಿತ್ತು.

ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 15 ರಂದು ಪತಂಜಲಿ ಆಯುರ್ವೇದ್ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಗೌತಮ್ ಬುದ್ಧ ನಗರದ ಪ್ರಾದೇಶಿಕ ಆಯುರ್ವೇದಿಕ್ ಮತ್ತು ಯುನಾನಿ ಅಧಿಕಾರಿ ಶುಕ್ರವಾರ 14 ಉತ್ಪನ್ನಗಳನ್ನು ನಿಷೇಧಿಸುವ ನಿರ್ದೇಶನವನ್ನು ಹೊರಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮವು ರಾಜ್ಯ ಔಷಧ ಪರವಾನಗಿ ಪ್ರಾಧಿಕಾರ, ಆಯುರ್ವೇದಿಕ್ ಮತ್ತು ಯುನಾನಿ ಸೇವೆಗಳು, ಉತ್ತರಾಖಂಡದ ಆದೇಶಗಳನ್ನು ಅನುಸರಿಸುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ಮಾಹಿತಿ ಕಚೇರಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯಕೀಯ ವೈದ್ಯರು ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಪಟ್ಟಿ ಮಾಡಲಾದ 14 ಉತ್ಪನ್ನಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.