ದೇಶ

ದಯವಿಟ್ಟು ಬ್ಲಾಂಕೆಟ್ ಗಳನ್ನು ವಾಪಸ್ ನೀಡಿ: ರಾಮಮಂದಿರ ಯಾತ್ರಾರ್ಥಿಗಳಿಗೆ ಟ್ರಸ್ಟ್ ಮನವಿ!

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಭಗವಾನ್ ರಾಮನ ದರ್ಶನಕ್ಕಾಗಿ ಲಕ್ಷೋಪಲಕ್ಷ ಮಂದಿ ಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಮಂದಿರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ದಯವಿಟ್ಟು ಬ್ಲಾಂಕೆಟ್ ಗಳನ್ನು ವಾಪಸ್ ನೀಡಿ: ರಾಮಮಂದಿರ ಯಾತ್ರಾರ್ಥಿಗಳಿಗೆ ಟ್ರಸ್ಟ್ ಮನವಿ!
ರಾಮ ಮಂದಿರ ಸ್ಥಳ (ಸಂಗ್ರಹ ಚಿತ್ರ)
Published On :

ಅಯೋಧ್ಯೆ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಭಗವಾನ್ ರಾಮನ ದರ್ಶನಕ್ಕಾಗಿ ಲಕ್ಷೋಪಲಕ್ಷ  ಮಂದಿ ಮಂದಿರಕ್ಕೆ ಆಗಮಿಸುತ್ತಿದ್ದಾರೆ. ಈ ನಡುವೆ ಮಂದಿರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ರಾಮಪಥದಲ್ಲಿ ನಡೆಯುತ್ತಿದ್ದ ಘೋಷಣೆಯ ಮೂಲಕ ಈ ಮಾಹಿತಿ ಲಭ್ಯವಾಗಿದೆ. ಅಯೋಧ್ಯೆಯಲ್ಲೇ ತಂಗಿದ್ದು ಮಂದಿರಕ್ಕೆ ಆಗಮಿಸಿದ ಭಕ್ತಾದಿಗಳಿಗಾಗಿ (ವಿವಿಐಪಿಯೇತರ) ತಾತ್ಕಾಲಿತ ಟೆಂಟ್ ಗಳನ್ನು ನಿರ್ಮಿಸಲಾಗಿತ್ತು. ಟೆಂಟ್ ಗಳಲ್ಲಿ ವಾಸ್ತವ್ಯ ಹೂಡಿದ್ದ ಭಕ್ತಾದಿಗಳು 300 ಬ್ಲ್ಯಾಂಕೆಟ್ ಗಳನ್ನು ಹೊತ್ತೊಯ್ದಿದ್ದಾರೆ. 

ಈ ತಾತ್ಕಾಲಿಕ ಟೆಂಟ್ ಗಳಿಂದ ಭಕ್ತಾದಿಗಳು ಬ್ಲ್ಯಾಂಕೆಟ್ ಹೊತ್ತೊಯ್ದಿರುವ ಮಾಹಿತಿಯನ್ನು ಪ್ರಕಟಿಸಿರುವ ಟ್ರಸ್ಟ್, ಅವುಗಳನ್ನು ವಾಪಸ್ ನೀಡುವಂತೆ ಹೇಳಿದೆ. ಈ ಬ್ಲಾಂಕೆಟ್ ಗಳನ್ನು ದಯವಿಟ್ಟು ವಾಪಸ್ ನೀಡಿ ಎಂದು ಟ್ರಸ್ಟ್ ಮನವಿ ಮಾಡಿದೆ. ಈ ದಿನವೂ ರಾಮಲಲ್ಲಾ ದರ್ಶನ ಪಡೆಯುವುದಕ್ಕೆ ಭಕ್ತ ಸಾಗರ ನೆರೆದಿದ್ದು ಕಿ.ಮೀ ಗಟ್ಟಲೆ ಭಕ್ತಾದಿಗಳು ಸರತಿಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.