ಅಪಾರ ಜನಸ್ತೋಮ, ಭಕ್ತರ ತಳ್ಳಾಟ, ನೂಕಾಟ: ಮಧ್ಯಾಹ್ನ 2.30ರವರೆಗೆ ರಾಮ ಮಂದಿರ ಬಾಗಿಲು ಮುಚ್ಚಿದ ಪೊಲೀಸರು
ರಾಮ ಮಂದಿರ ಉದ್ಘಾಟನೆಯಾದ ಮರುದಿನ ಇಂದು ಮಂಗಳವಾರ ಮುಂಜಾನೆ ದೇವಾಲಯದ ಬಾಗಿಲು ಸಾರ್ವಜನಿಕ ದರ್ಶನಕ್ಕೆ ತೆರೆಯುತ್ತಿದ್ದಂತೆ ವಿಪರೀತ ನೂಕುನುಗ್ಗಲು ಉಂಟಾಯಿತು.

ಅಯೋಧ್ಯೆ: ರಾಮ ಮಂದಿರ ಉದ್ಘಾಟನೆಯಾದ ಮರುದಿನ ಇಂದು ಮಂಗಳವಾರ ಮುಂಜಾನೆ ದೇವಾಲಯದ ಬಾಗಿಲು ಸಾರ್ವಜನಿಕ ದರ್ಶನಕ್ಕೆ ತೆರೆಯುತ್ತಿದ್ದಂತೆ ವಿಪರೀತ ನೂಕುನುಗ್ಗಲು ಉಂಟಾಯಿತು.
ವಿಶೇಷ ಪೂಜೆ ಹಾಗೂ ಬಾಲರಾಮನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಇದರಿಂದ ಅಪಾರ ಜನಸ್ತೋಮವನ್ನು ನಿಭಾಯಿಸಲು ಹರಸಾಹಸ ಪಡುತ್ತಿರುವ ಅಯೋಧ್ಯೆ ಪೊಲೀಸರು ಮಧ್ಯಾಹ್ನ 2.30ರವರೆಗೆ ದೇವಾಲಯದ ದ್ವಾರಗಳನ್ನು ಮುಚ್ಚಿರುವುದಾಗಿ ಘೋಷಿಸಿದ್ದಾರೆ.
"ದರ್ಶನಕ್ಕಾಗಿ ಬಂದಿರುವ ಭಾರತ ಮತ್ತು ಹೊರಗಿನ ಪ್ರವಾಸಿಗರು ದಯವಿಟ್ಟು ದೇವಾಲಯದ ದ್ವಾರಗಳಿಗೆ ಬರದಂತೆ ಕೇಳಿಕೊಳ್ಳುತ್ತೇವೆ" ಎಂದು ಪೊಲೀಸರು ರಾಂಪತ್‌ನಲ್ಲಿ ಘೋಷಿಸಿದ್ದಾರೆ.
ನಿನ್ನೆ ರಾತ್ರಿ, ಮಹಾಮಸ್ತಕಾಭಿಷೇಕ ಸಮಾರಂಭಕ್ಕಾಗಿ ಅಲಂಕೃತವಾಗಿದ್ದ ವಿಧ್ಯುಕ್ತ ಗೇಟ್‌ವೇ ಬಳಿ ಹೆಚ್ಚಿನ ಜನರು ಜಮಾಯಿಸಿದ್ದಾರೆ. ಪೊಲೀಸರಿಗೆ ಜನರನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ. ಮುಂಜಾನೆ 3 ಗಂಟೆಯಿಂದಲೇ ಭಕ್ತರು ಗುಂಪು ಗುಂಪಾಗಿ ಆಗಮಿಸುತ್ತಿದ್ದು, ದೇವಾಲಯದ ಆವರಣದಲ್ಲಿ ನೂಕು ನುಗ್ಗಲು ಉಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


