ದೇಶ

4 ವರ್ಷದ ಮಗನ ಹತ್ಯೆ: ಬೆಂಗಳೂರು ಮೂಲದ ಸುಚನಾ ಸೇಠ್ ಗೆ 13 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

11 ದಿನಗಳ ಪೊಲೀಸ್ ಕಸ್ಟಡಿ ನಂತರ, ಪಣಜಿಯ ಬಾಲಾಪರಾಧಿ ನ್ಯಾಯಾಲಯವು ತನ್ನ 4 ವರ್ಷದ ಮಗನ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಎಐ ಸಿಇಒ ಸುಚನಾ ಸೇಠ್‌ಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

4 ವರ್ಷದ ಮಗನ ಹತ್ಯೆ: ಬೆಂಗಳೂರು ಮೂಲದ ಸುಚನಾ ಸೇಠ್ ಗೆ 13 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
ಸುಚನಾ ಸೇಠ್ ರನ್ನು ಬಂಧಿಸಿ ಪೊಲೀಸರು ಕರೆತರುತ್ತಿರುವ ದೃಶ್ಯ
Published On :

ಪಣಜಿ/ಬೆಳಗಾವಿ: 11 ದಿನಗಳ ಪೊಲೀಸ್ ಕಸ್ಟಡಿ ನಂತರ, ಪಣಜಿಯ ಬಾಲಾಪರಾಧಿ ನ್ಯಾಯಾಲಯವು, ತನ್ನ 4 ವರ್ಷದ ಮಗನ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಎಐ ಸಿಇಒ ಸುಚನಾ ಸೇಠ್‌ಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

ಸುಚನಾ ಸೇಠ್ ಜನವರಿ 7 ರಂದು ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ತಂಗಿದ್ದ ಸಮಯದಲ್ಲಿ ತನ್ನ 4 ವರ್ಷದ ಮಗುವನ್ನು ಕೈಯಾರೆ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 

ಸುಚನಾ ಸೇಠ್ ಜನವರಿ 8ರಂದು ಮಗುವನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿಸಿ ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಕಲಾಂಗುಟೆ ಪೊಲೀಸರು ಶವದೊಂದಿಗೆ ಚಿತ್ರದುರ್ಗದಲ್ಲಿ ಆಕೆಯನ್ನು ಬಂಧಿಸಿ ಅದೇ ದಿನ ಎಫ್‌ಐಆರ್ ದಾಖಲಿಸಿಕೊಂಡಿದ್ದರು. 

ಅಂದಿನಿಂದ, ಪಣಜಿಯ ಬಾಲಾಪರಾಧಿ ನ್ಯಾಯಾಲಯದ ವಶದಲ್ಲಿ ಸುಚನಾ ಸೇಠ್ ಇದ್ದರು. ನ್ಯಾಯಾಲಯದ ಆದೇಶದಂತೆ ನಿನ್ನೆ ಸುಚನಾರನ್ನು ವಿಚಾರಣೆಗೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.