ಪ್ರತಿಭಟನೆ ಮಧ್ಯೆ, ಇಡಿಯಿಂದ ಜಾರ್ಖಂಡ್ ಸಿಎಂಗೆ ವಿಚಾರಣೆ; 'ಯಾರಿಗೂ ಹೆದರಲ್ಲ' ಎಂದ ಸೋರೆನ್
ಜೆಎಂಎಂ ಕಾರ್ಯಕರ್ತರ ಪ್ರತಿಭಟನೆಯ ನಡುವೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ರಾಂಚಿಯ ಅವರ ನಿವಾಸದಲ್ಲಿ ಸತತ ಏಳು...

ರಾಂಚಿ: ಜೆಎಂಎಂ ಕಾರ್ಯಕರ್ತರ ಪ್ರತಿಭಟನೆಯ ನಡುವೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ರಾಂಚಿಯ ಅವರ ನಿವಾಸದಲ್ಲಿ ಸತತ ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದರು.
ಸುಮಾರು 8 ಅಧಿಕಾರಿಗಳಿದ್ದ ಇಡಿ ತಂಡ ಮಧ್ಯಾಹ್ನ 1 ಗಂಟೆಗೆ ಸಿಎಂ ನಿವಾಸಕ್ಕೆ ಆಗಮಿಸಿ, ಸೋರೆನ್ ಅವರನ್ನು ರಾತ್ರಿ 8:30ರ ವರೆಗೂ ವಿಚಾರಣೆಗೆ ಒಳಪಡಿಸಿದರು.
ವಿಚಾರಣೆಯ ನಂತರ, ಬೆಳಗ್ಗೆಯಿಂದಲೇ ತಮ್ಮ ನಿವಾಸದ ಬಳಿ ಜಮಾಯಿಸಿದ್ದ ಜೆಎಂಎಂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸೋರೆನ್, ತಮ್ಮನ್ನು ಭೂ ಹಗರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ತಾವು ಜಾರ್ಖಂಡಿ ಆಗಿರುವುದರಿಂದ ಯಾರಿಗೂ ಹೆದರುವುದಿಲ್ಲ ಎಂದರು.
“ಅವರು ನಮ್ಮೊಂದಿಗೆ ರಾಜಕೀಯವಾಗಿ ಸ್ಪರ್ಧಿಸಲು ಸಾಧ್ಯವಾಗದಿದ್ದಾಗ, ತನಿಖಾ ಸಂಸ್ಥೆಗಳ ಮೂಲಕ ನಮ್ಮನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಸರ್ಕಾರವನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಈ ಸರ್ಕಾರದ ಮೇಲೆ ಕೆಟ್ಟ ದೃಷ್ಟಿ ಹೊಂದಿರುವವರಿಗೆ ತಕ್ಕ ಉತ್ತರ ನೀಡಲಾಗುವುದು" ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಭೂ ಹಗರಣ ಪ್ರಕರಣದಲ್ಲಿ ಎಂಟನೇ ಬಾರಿಗೆ ಸಮನ್ಸ್ ಪಡೆದಿದ್ದ ಸೋರೆನ್ ಅವರು ಇಡಿ ವಿಚಾರಣೆಗೆ ಒಪ್ಪಿಕೊಂಡ ನಂತರ ಇಂದು ಮಧ್ಯಾಹ್ನ ಅವರ ನಿವಾಸದಲ್ಲಿ ಪ್ರಶ್ನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


