ಚಿನ್ನದ ಎಲೆ ಬಳಕೆ ಮಾಡಿರುವ ರಾಮ ಮಂದಿರ ಕುರಿತ ಆರು ಅಂಚೆಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
ಅಯೋಧ್ಯೆ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ವಿಶ್ವದಾದ್ಯಂತ ದೇಶಗಳು ಬಿಡುಗಡೆ ಮಾಡಿರುವ ಭಗವಾನ್ ರಾಮನಿಗೆ ಸಮರ್ಪಿತ ಅಂಚೆಚೀಟಿಗಳ ಪುಸ್ತಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಬಿಡುಗಡೆ ಮಾಡಿದರು.

ನವದೆಹಲಿ: ಅಯೋಧ್ಯೆ ರಾಮಮಂದಿರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ವಿಶ್ವದಾದ್ಯಂತ ದೇಶಗಳು ಬಿಡುಗಡೆ ಮಾಡಿರುವ ಭಗವಾನ್ ರಾಮನಿಗೆ ಸಮರ್ಪಿತ ಅಂಚೆಚೀಟಿಗಳ ಪುಸ್ತಕವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಬಿಡುಗಡೆ ಮಾಡಿದರು.
ಅಂಚೆಚೀಟಿಗಳ ವಿನ್ಯಾಸದ ಅಂಶಗಳಲ್ಲಿ ರಾಮ ಮಂದಿರ, ಚೌಪೈ (ಪದ್ಯ) 'ಮಂಗಲ್ ಭವನ ಅಮಂಗಲ್ ಹರಿ', ಸೂರ್ಯ, ಸರಯುೂ ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಸೇರಿವೆ.
ಇಂದು ಬಿಡುಗಡೆಯಾದ ಆರು ಸ್ಮರಣಾರ್ಥ ಅಂಚೆಚೀಟಿಗಳು ಅಯೋಧ್ಯೆಯ ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಮಾ ಶಬ್ರಿ-ರಾಮನ ನಿರೂಪಣೆಗೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ವ್ಯಕ್ತಿಗಳು ಮತ್ತು ಚಿಹ್ನೆಗಳನ್ನು ಒಳಗೊಂಡಿದೆ.
ಸೂರ್ಯನ ಕಿರಣಗಳನ್ನು ವಿವರಿಸುವ ಚಿನ್ನದ ಎಲೆಗಳ ಬಳಕೆ ಮತ್ತು ಅಂಚೆಚೀಟಿಗಳ ಮೇಲೆ ಕಾಣಿಸಿಕೊಂಡಿರುವ ಚೌಪಾಯಿ ಅಂಚೆಚೀಟಿಗಳಿಗೆ ಭವ್ಯವಾದ ಸ್ಪರ್ಶವನ್ನು ನೀಡುತ್ತದೆ.
ಪಂಚಭೂತಗಳಾದ ಆಕಾಶ, ಗಾಳಿ, ಬೆಂಕಿ, ಭೂಮಿ ಮತ್ತು ನೀರು, ವಿವಿಧ ವಿನ್ಯಾಸ ಅಂಶಗಳ ಮೂಲಕ ಈ ಅಂಚೆಚೀಟಿಗಳು ಪ್ರತಿಫಲಿಸುತ್ತದೆ. ಎಲ್ಲಾ ಅಭಿವ್ಯಕ್ತಿಗಳಿಗೆ ಅಗತ್ಯವಾದ ಪಂಚಮಹಾಭೂತಗಳ ಪರಿಪೂರ್ಣ ಸಾಮರಸ್ಯವನ್ನು ಸ್ಥಾಪಿಸುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


