ದೇಶ

ದೆಹಲಿ: ಮಹಿಳೆಯ ಆಮಿಷಕ್ಕೆ 12 ವರ್ಷದ ಬಾಲಕಿ ಬಲಿ, ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರಿಂದ ಅತ್ಯಾಚಾರ!

ದೆಹಲಿಯಲ್ಲಿ ಮಹಿಳೆಯೊಬ್ಬರು 12 ವರ್ಷದ ಬಾಲಕಿಯ ಜೀವನಕ್ಕೆ ಮುಳುವಾಗಿದ್ದಾರೆ. ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆ ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರು ಅತ್ಯಾಚಾರವೆಸಗಿದ್ದಾರೆ.

ದೆಹಲಿ: ಮಹಿಳೆಯ ಆಮಿಷಕ್ಕೆ 12 ವರ್ಷದ ಬಾಲಕಿ ಬಲಿ, ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರಿಂದ ಅತ್ಯಾಚಾರ!
ಅತ್ಯಾಚಾರ (ಸಂಗ್ರಹ ಚಿತ್ರ)
Published On :

ನವದೆಹಲಿ: ದೆಹಲಿಯಲ್ಲಿ ಮಹಿಳೆಯೊಬ್ಬರು 12 ವರ್ಷದ ಬಾಲಕಿಯ ಜೀವನಕ್ಕೆ ಮುಳುವಾಗಿದ್ದಾರೆ. ಯುವತಿಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆ ಅಪ್ರಾಪ್ತೆ ಮೇಲೆ ಟೀ ಮಾರಾಟಗಾರ, 3 ಅಪ್ರಾಪ್ತರು ಅತ್ಯಾಚಾರವೆಸಗಿದ್ದಾರೆ. 

ದೆಹಲಿಯ ಸದಾರ್ ಬಜಾರ್ ನಲ್ಲಿ ಈ ಘಟನೆ ವರದಿಯಾಗಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ ಮಹಿಳೆ ಟೀ ಮಾರಾಟ ಮಾಡುವವನ ಅಂಗಡಿಯ ಗ್ರಾಹಕಿಯಾಗಿದ್ದಳು, 12, 14, 15 ವರ್ಷದ ಮೂವರು ಯುವಕರು ಟೀ ಸ್ಟಾಲ್ ನಲ್ಲಿ ನೌಕರಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಜ. 1 ರಂದು ಟೀ ಸ್ಟಾಲ್ ಮಾಲಿಕ ಮಹಿಳೆಗೆ ಹೊಸ ವರ್ಷಾಚರಣೆ ಮಾಡಲು ಓರ್ವ ಯುವತಿಯನ್ನು ಕರೆತರಲು ಸೂಚಿಸಿದ್ದ. ಹೊಸ ವರ್ಷಾಚರಣೆ ಮಾಡಲು ಆರೋಪಿ ಮುಚ್ಚಿದ್ದ ಕಟ್ಟಡದಲ್ಲಿ ಟಾರ್ಪಾಲ್ ಹಾಕಿ ತಾತ್ಕಾಲಿಕ ಟೆಂಟ್ ನಿರ್ಮಿಸಿದ್ದ. ಈ ವ್ಯಕ್ತಿ ಯುವತಿಯನ್ನು ಪುಸಲಾಯಿಸಿ ಕರೆತರಲು ಮಹಿಳೆಗೆ ಹಣ ನೀಡಿರುವ ಆರೋಪವೂ ಕೇಳಿಬಂದಿದೆ.

ಮರುದಿನ, ಮಹಿಳೆ 12 ವರ್ಷದ ಬಾಲಕಿಯನ್ನು, ಇನ್ನೊಬ್ಬ ಚಿಂದಿ ಆಯುವವರನ್ನು ಭೇಟಿಯಾದರು, ಮತ್ತು ಖುರ್ಷಿದ್ ಮಾರ್ಕೆಟ್‌ನ ಕಟ್ಟಡದ ಛಾವಣಿಯಿಂದ ಕಸ ಸಂಗ್ರಹಿಸಲು ಹೇಳಿದರು. ಹುಡುಗಿ ಪ್ರದೇಶವನ್ನು ತಲುಪಿದಾಗ, ನಾಲ್ವರು ಆರೋಪಿಗಳು ಅವಳಿಗಾಗಿ ಕಾಯುತ್ತಿದ್ದರು. ಅವರು ತಾತ್ಕಾಲಿಕ ಟೆಂಟ್ ಒಳಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಬಾಲಕಿ ವಾಯವ್ಯ ದೆಹಲಿಯಲ್ಲಿರುವ ತನ್ನ ಮನೆಗೆ ಹಿಂದಿರುಗಿದಳು ಮತ್ತು ಎರಡು ದಿನಗಳ ಕಾಲ ಮೌನವಾಗಿದ್ದಳು. ಆದರೆ ಜನವರಿ 5 ರಂದು ಸದರ್ ಬಜಾರ್‌ಗೆ ಕಸ ತೆಗೆಯಲು ಹಿಂದಿರುಗಿದಾಗ, ಆ ಪ್ರದೇಶದಲ್ಲಿ ವಾಸಿಸುವ ತನ್ನ ಸೋದರಸಂಬಂಧಿ ಬಳಿ ನಡೆದ ಘಟನೆಯನ್ನು ಹೇಳಿಕೊಂಡಿದ್ದಾಳೆ. ಸೋದರ ಸಂಬಂಧಿ ಪೋಷಕರಿಗೆ ತಿಳಿಸಿದ್ದು, ಮನೆಯವರು ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.  ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೀ ಅಂಗಡಿ ಮಾಲೀಕರು ಛತ್ತೀಸ್‌ಗಢದ ನಿವಾಸಿಯಾಗಿದ್ದು, ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಹುಡುಗರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಿಂದ ಬಂದವರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.