ಗುಜರಾತ್ ಕರಾವಳಿಯಲ್ಲಿ ದಾಖಲೆ ಪ್ರಮಾಣದ 3,300 ಕೆ.ಜಿ ಮಾದಕವಸ್ತು ವಶ: ಐವರು ವಿದೇಶಿಗರ ಬಂಧನ
ಗುಜರಾತ್ ಕರಾವಳಿಯಲ್ಲಿ ದಾಖಲೆ ಪ್ರಮಾಣದ 3,300 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇರಾನ್ ದೋಣಿಯಲ್ಲಿದ್ದ ಐವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಬುಧವಾರ ತಿಳಿಸಿದೆ.

ಪೋರಬಂದರ್: ಗುಜರಾತ್ ಕರಾವಳಿಯಲ್ಲಿ ದಾಖಲೆ ಪ್ರಮಾಣದ 3,300 ಕೆಜಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇರಾನ್ ದೋಣಿಯಲ್ಲಿದ್ದ ಐವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಎನ್‌ಸಿಬಿ ಬುಧವಾರ ತಿಳಿಸಿದೆ.
ನೌಕಾಪಡೆ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿಯಾಗಿ ಇಂಟರ್‌ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ (IMBL) ಉದ್ದಕ್ಕೂ ಅರಬ್ಬಿ ಸಮುದ್ರದಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿವೆ.
ವಶಪಡಿಸಿಕೊಂಡ ಮಾದಕವಸ್ತುವಿನಲ್ಲಿ ಚರಸ್, ಮೆಥಾಂಫೆಟಮೈನ್ ಮತ್ತು ಮಾರ್ಫಿನ್ ಇದೆ ಎಂದು ಶಂಕಿಸಲಾಗಿದೆ.
ಎನ್‌ಸಿಬಿ ಮತ್ತು ಇತರ ಸಂಸ್ಥೆಗಳು ಮತ್ತೊಂದು ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿವೆ ಮತ್ತು ದೇಶದಲ್ಲಿ ಇದು ಈವರೆಗಿನ ದಾಖಲೆ ಪ್ರಮಾಣದ ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಾಗಿದೆ ಎಂದು ಎನ್‌ಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಐವರನ್ನು ಇರಾನ್ ಅಥವಾ ಪಾಕಿಸ್ತಾನಿ ಪ್ರಜೆಗಳೆಂದು ಶಂಕಿಸಲಾಗಿದೆ. ಅವರಿಂದ ಯಾವುದೇ ರಾಷ್ಟ್ರೀಯತೆಯ ಕುರಿತಾದ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಕಳ್ಳಸಾಗಾಣಿಕೆ ಮಾಡುತ್ತಿದ್ದ ದೋಣಿ ಮತ್ತು ಸಿಬ್ಬಂದಿಯನ್ನು ಭಾರತೀಯ ಬಂದರಿನಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಭಾರತೀಯ ನೌಕಾಪಡೆಯು ಎನ್‌ಸಿಬಿಯೊಂದಿಗೆ ನಡೆಸಿದ ಜಂಠಿ ಕಾರ್ಯಾಚರಣೆಯಲ್ಲಿ, ಸುಮಾರು 3,300 ಕೆಜಿ ಮಾದಕವಸ್ತುವನ್ನು ಸಾಗಿಸುತ್ತಿದ್ದ ಅನುಮಾನಾಸ್ಪದ ದೋಣಿಯನ್ನು ವಶಪಡಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಂಡು ಅತಿ ಹೆಚ್ಚಿನ ಪ್ರಮಾಣದ ಮಾದಕವಸ್ತು ಇದಾಗಿದೆ' ಎಂದು ನೌಕಾಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.
ನಿರ್ದಿಷ್ಟ ಸುಳಿವು ಆಧರಿಸಿ ಅರಬ್ಬಿ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ಬಳಿ ಕಾರ್ಯಾಚರಣೆ ನಡೆಸಲಾಗಿದೆ. ಮಂಗಳವಾರ ರಾಜ್ಯ ಕರಾವಳಿಯ ಮಧ್ಯ ಸಮುದ್ರದ ಕಾರ್ಯಾಚರಣೆಯಲ್ಲಿ ದೋಣಿಯಿಂದ ಚರಸ್ (ಹಶಿಶ್) ಸೇರಿದಂತೆ ವಿವಿಧ ರೀತಿಯ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



