ಆಘಾತಕಾರಿ ವಿಡಿಯೋ: ಅಂಗಡಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ
ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ಮಹಿಳಾ ಸಂಗ್ರಹ ಮಳಿಗೆ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ರಾಜಸ್ಥಾನದ ಫಲೋಡಿ ಜಿಲ್ಲೆಯಲ್ಲಿ ಮಹಿಳಾ ಸಂಗ್ರಹ ಮಳಿಗೆ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.
ಅಂಗಡಿಗೆ ಬಂದಿದ್ದ ಪತಿ ಹಾಗೂ ಪತ್ನಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದಾದ ಬಳಿಕ ಸಿಟ್ಟಿನಿಂದ ಪತಿ ಪತ್ನಿಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಫಲೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೌರ್ ರಸ್ತೆಯಲ್ಲಿರುವ ಸಿಟಿ ಪಾಯಿಂಟ್ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಮಹಿಳೆ 33 ವರ್ಷದ ಅನಾಮಿಕಾ ಬಿಷ್ಣೋಯ್ ಅವರು ಸಿಟಿ ಪಾಯಿಂಟ್ ಆಫ್ ಫಲೋಡಿ ಬಳಿ ನಾರಿ ಕಲೆಕ್ಷನ್ ಹೆಸರಿನಲ್ಲಿ ಅಂಗಡಿಯನ್ನು ನಡೆಸುತ್ತಿದ್ದರು.
ಪತಿ ಮಹಿರಾಮ್ ಬಿಷ್ಣೋಯ್ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಡಿಎಸ್ಪಿ ರಾಮಕರನ್ ಸಿಂಗ್, ಸಿಐ ಭನ್ವರ್ ಸಿಂಗ್ ಸೇರಿದಂತೆ ಪೊಲೀಸ್ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಪತ್ನಿಯನ್ನು ಕೊಂದು ಪತಿ ಮಹಿರಾಮ್ ಪರಾರಿ
ಮೃತ ಅನಾಮಿಕಾ ಬಿಷ್ಣೋಯಿ ಪತಿ ಮಹಿರಾಮ್ ಬಿಷ್ಣೋಯ್ ಮಧ್ಯಾಹ್ನ 12 ಗಂಟೆಗೆ ಅಂಗಡಿಗೆ ಬಂದಿದ್ದನು ಎಂದು ಫಲೋಡಿ ಜಿಲ್ಲಾ ಹಂಗಾಮಿ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ತಿವಾರಿ ತಿಳಿಸಿದ್ದಾರೆ. ಅಂಗಡಿಯಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಮಧ್ಯಾಹ್ನ ಮೂರು ಗಂಟೆಯಾದರೂ ಅನಾಮಿಕಾ ಬಿಷ್ಣೋಯ್ ಅಂಗಡಿಯಿಂದ ಹೊರಗೆ ಬರಲಿಲ್ಲ. ಆಗ ಪಕ್ಕದ ಅಂಗಡಿಯವನು ಅನಾಮಿಕಾ ಕುರ್ಚಿಯ ಮೇಲೆ ಬಾಗಿ ಕುಳಿತಿದ್ದನ್ನು ನೋಡಿದ್ದಾನೆ. ಬಹಳ ಹೊತ್ತಾದರೂ ಚಲನವಲನ ಮಾಡದಿದ್ದಾಗ ಪಕ್ಕದ ಮನೆಯವರು ಒಳಗೆ ಹೋಗಿ ನೋಡಿದರು. ನೆಲದ ಮೇಲೆ ಅಲ್ಲಲ್ಲಿ ರಕ್ತ ಬಿದ್ದಿತ್ತು. ಬುಲೆಟ್ ಶೆಲ್ ಕೂಡ ನೆಲದ ಮೇಲೆ ಬಿದ್ದಿತ್ತು. ಈ ಬಗ್ಗೆ ಅನಾಮಿಕಾಳ ತಂದೆ ತೇಜರಾಮ್ ಅವರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಮಹಿಳೆಯನ್ನು ಫಲೋಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಫಲೋಡಿ ಜಿಲ್ಲಾ ಹಂಗಾಮಿ ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ತಿವಾರಿ ಮಾತನಾಡಿ, ಅನಾಮಿಕಾ 13 ವರ್ಷಗಳ ಹಿಂದೆ ಬಿಕಾನೇರ್ ನ ನಗರಸರ ನಿವಾಸಿ ಗೋಪಿರಾಮ್ ಅವರ ಪುತ್ರ ಮಹಿರಾಮ್ ಬಿಷ್ಣೋಯ್ ಅವರನ್ನು ವಿವಾಹವಾಗಿದ್ದರು. ಮಹಿಳೆಯ ಪತಿ ಮಹಿರಾಮ್ ಗ್ರಾಮದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾನೆ. ಇಬ್ಬರ ನಡುವೆ 2 ವರ್ಷಗಳಿಂದ ಜಗಳ ನಡೆಯುತ್ತಿತ್ತು. ಜೀವನಾಂಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬನಿಗೆ 12 ವರ್ಷ ಮತ್ತು ಇನ್ನೊಬ್ಬನಿಗೆ 10 ವರ್ಷ.
ಎರಡು ವರ್ಷಗಳಿಂದ ಅನಾಮಿಕಾ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಫಲೋಡಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಇಂದು ಬೆಳಗ್ಗೆ 11:30ರ ಸುಮಾರಿಗೆ ಮಹಿರಾಮ್ ಅನಾಮಿಕಾ ಮನೆಗೆ ಹೋಗಿದ್ದನು. ಇವತ್ತು ಒಂದೋ ನಿನ್ನ ಅಮ್ಮ ಇರುತ್ತಾಳೆ. ಇಲ್ಲ ನಾನು ಇರುತ್ತೇನೆ ಎಂದು ಮಕ್ಕಳಿಬ್ಬರಿಗೂ ಹೇಳಿ ಹೋಗಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



