ದೇಶ

ತಮಿಳುನಾಡು: ಬೀದಿ ಕಾಮಣ್ಣರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಯುವತಿ ಕಾರಿಗೆ ಸಿಲುಕಿ ಸಾವು!

ತನ್ನೊಡನೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗಲು ಯತ್ನಿಸುತ್ತಿದ್ದ ವೇಳೆ 20 ವರ್ಷದ ಯುವತಿ ಕಾರಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚೆನ್ನೈನ ತಿರುವಣ್ಣಾಮಲೈ ನಲ್ಲಿ ನಡೆದಿದೆ.

ತಮಿಳುನಾಡು: ಬೀದಿ ಕಾಮಣ್ಣರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಯುವತಿ ಕಾರಿಗೆ ಸಿಲುಕಿ ಸಾವು!
ಸಾಂದರ್ಭಿಕ ಚಿತ್ರ
Published On :

ವಿಲ್ಲುಪುರಂ: ತನ್ನೊಡನೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗಳಿಂದ ತಪ್ಪಿಸಿಕೊಳ್ಳಲು ಓಡಿಹೋಗಲು ಯತ್ನಿಸುತ್ತಿದ್ದ ವೇಳೆ 20 ವರ್ಷದ ಯುವತಿ ಕಾರಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚೆನ್ನೈನ ತಿರುವಣ್ಣಾಮಲೈ ನಲ್ಲಿ ನಡೆದಿದೆ.

ಕೇರಳದ ತ್ರಿಶೂರ್‌ನ ಎಸ್‌ ಪವಿತ್ರಾ ಮೃತ ಯುವತಿ. ಶನಿವಾರ ನಸುಕಿನ ವೇಳೆ ಆಕೆ ತನ್ನ ಸಂಗಾತಿ ಪಿ ರಮೇಶ್ (21) ಜೊತೆ ಚೆನ್ನೈನ ಮಾಧವರಂನಿಂದ ತಿರುವಣ್ಣಾಮಲೈಗೆ ಪ್ರಯಾಣಿಸುತ್ತಿದ್ದಳು. ಪವಿತ್ರಾ ಚೆನ್ನೈನ ಜವಳಿ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ರಮೇಶ್ ನಗರದ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮೇಶ್ ಹೇಳಿಕೆ ಪ್ರಕಾರ, ಶುಕ್ರವಾರ ರಾತ್ರಿ ಇಬ್ಬರೂ ತಿರುವಣ್ಣಾಮಲೈಗೆ ತೆರಳಿದ್ದರು. ಒಲಕ್ಕೂರು ಟೋಲ್‌ಗೇಟ್‌ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ನಮ್ಮನ್ನು ತಡೆದು, ಫೋನ್‌ ಕಸಿದುಕೊಂಡರು, ನಂತರ ಪವಿತ್ರಾ ಜೊತೆ ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಪವಿತ್ರಾ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾಳೆ. ಡಿಕ್ಕಿ ಹೊಡೆದ ಕಾರು ವೇಗವಾಗಿ ಹೊರಟು ಹೋಗಿದೆ. ಹಾಗೆಯೇ ಇಬ್ಬರು ಅಪರಿಚಿತ ವ್ಯಕ್ತಿಗಳು ಓಡಿ ಹೋದರು ಎಂದು ರಮೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಅಧಿಕಾರಿಗಳು ಸಂಪೂರ್ಣ ತನಿಖೆ ಆರಂಭಿಸಿದ್ದು, ಉಪ ಐಜಿ ದಿಶಾ ಮಿತ್ತಲ್ ಮತ್ತು ಡಿಎಸ್ಪಿ ದೀಪಕ್ ಸಿವಾಚ್ ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆಗೆ ವಿಶೇಷ ತಂಡವನ್ನೂ ರಚಿಸಲಾಗಿದೆ.

ನಾವು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ರಮೇಶ್ ಹೇಳಿಕೆಯ ಬಗ್ಗೆ ನಮ್ಮ ತನಿಖೆಯು ಪ್ರಸ್ತುತ ನಡೆಯುತ್ತಿದೆ, ಏಕೆಂದರೆ ನಮಗೆ ಆತನ ಹೇಳಿಕೆಗಳ ಬಗ್ಗೆ ಅನುಮಾನಗಳಿವೆ. ಒಂದೆರೆಡು ದಿನಗಳಲ್ಲಿ ವಿಷಯ ತಿಳಿಯಲಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.