ದೇಶ

ಲೋಕಸಭಾ ಚುನಾವಣೆ: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ರತ್ಲಾಮ್ ನಲ್ಲಿ ಫೆ.11ಕ್ಕೆ ಪ್ರಧಾನಿ ಮೋದಿ ರಣಕಹಳೆ!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಶಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 11 ರಂದು ಎಸ್.ಟಿ ಕ್ಷೇತ್ರ ರತ್ಲಾಮ್-ಜಬುವಾದಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.

ಲೋಕಸಭಾ ಚುನಾವಣೆ: ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ರತ್ಲಾಮ್ ನಲ್ಲಿ ಫೆ.11ಕ್ಕೆ ಪ್ರಧಾನಿ ಮೋದಿ ರಣಕಹಳೆ!
ಪ್ರಧಾನಿ ಮೋದಿ
Published On :

ಭೋಪಾಲ್: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಶಯದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 11 ರಂದು ಎಸ್.ಟಿ ಕ್ಷೇತ್ರ ರತ್ಲಾಮ್-ಜಬುವಾದಲ್ಲಿ ರಣಕಹಳೆ ಮೊಳಗಿಸಲಿದ್ದಾರೆ. 

ಪಶ್ಚಿಮ ಮಧ್ಯಪ್ರದೇಶದ ಭಿಲ್-ಬುಡಕಟ್ಟು ಪ್ರಾಬಲ್ಯದ ಜಬುವಾ ಜಿಲ್ಲೆಯ ಗೋಪಾಲಪುರ ಏರ್‌ಸ್ಟ್ರಿಪ್ ಬಳಿ ಅವರು ಮೆಗಾ ಜನ ಜಾತಿಯ ರ್‍ಯಾಲಿಯನ್ನುದ್ದೇಶಿಸಿ  ಮಾತನಾಡಲಿದ್ದಾರೆ. ರತ್ಲಾಮ್-ಜಬುವಾ ಎಸ್‌ಟಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಗೆದ್ದಿದೆ. ಇಲ್ಲಿ ಕಾಂಗ್ರೆಸ್ 14 ಬಾರಿ ಗೆದ್ದಿದೆ. ರತ್ಲಾಮ್-ಜಬುವಾ ಎಸ್‌ಟಿ ಕ್ಷೇತ್ರ ಮತ್ತು ಗುನಾ ಕ್ಷೇತ್ರ ಕಾಂಗ್ರೆಸ್ ಕೋಟೆಗಳಾಗಿದ್ದು, 2019 ರ ಲೋಕಸಭಾ ಚುನಾವಣೆ ವೇಳೆ ಮೋದಿ ಅಲೆಯ ಮೇಲೆ ಬಿಜೆಪಿ ಗೆದ್ದುಕೊಂಡಿತು.

ರಾಜ್ಯ ಬಿಜೆಪಿ ಮುಖ್ಯಸ್ಥ ವಿ.ಡಿ.ಶರ್ಮಾ, ರಾಜ್ಯ ಲೋಕಸಭಾ ಚುನಾವಣಾ ಉಸ್ತುವಾರಿ ಡಾ.ಮಹೇಂದ್ರ ಸಿಂಗ್ ಮತ್ತು ಸಹ ಉಸ್ತುವಾರಿ ಸತೀಶ್ ಉಪಾಧ್ಯಾಯ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಎಂಟು ಅಸೆಂಬ್ಲಿಯಿಂದ ಆದಿವಾಸಿಗಳನ್ನು ಒಟ್ಟುಗೂಡಿಸುವ ರ್‍ಯಾಲಿಯ ಸಿದ್ಧತೆಗಳನ್ನು ಪರಿಶೀಲಿಸಿದರು. "ಇದು ಐತಿಹಾಸಿಕ ಬುಡಕಟ್ಟು ರ್‍ಯಾಲಿಯಾಗಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿಯವರು ಚುನಾವಣಾ ರಣಕಹಳೆ ಊದಲಿದ್ದಾರೆ ಎಂದು ಶರ್ಮಾ  ಪತ್ರಕರ್ತರಿಗೆ ತಿಳಿಸಿದರು.

ರ್‍ಯಾಲಿಯು ಪಶ್ಚಿಮ ಮಧ್ಯಪ್ರದೇಶದ ರತ್ಲಾಮ್ ಜಬುವಾ ಎಸ್ ಟಿ ಕ್ಷೇತ್ರ ಹಾಗೂ ಪಕ್ಕದ ಕ್ಷೇತ್ರಗಳತ್ತ ಗಮನ ಹರಸಿದ್ದರೂ ವಾಸ್ತವವಾಗಿ ನೆರೆಯ ಗುಜರಾತ್‌ನ ಭಿಲ್ ಬುಡಕಟ್ಟು ಪ್ರಾಬಲ್ಯವಿರುವ ದಾಹೋದ್, ಚೋಟಾ ಉದಯ್‌ಪುರ, ಪಂಚಮಹಲ್ ಮತ್ತು ಮಹಿಸಾಗರ್ ಜಿಲ್ಲೆಗಳು ಹಾಗೂ ರಾಜಸ್ಥಾನದ ಬನ್ಸ್‌ವಾರಾ, ಡುಂಗರ್‌ಪುರ ಮತ್ತು ಪ್ರತಾಪ್‌ಗಢ ಜಿಲ್ಲೆಗಳಲ್ಲಿ ಬುಡಕಟ್ಟು ಮತದಾರರಿಗೆ ಸಂದೇಶ ಕಳುಹಿಸಲು ಕಾರ್ಯತಂತ್ರವಾಗಿ ಯೋಜಿಸಲಾಗಿದೆ ಎಂದು ಸ್ಥಳೀಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಚಂದ್ರಭಾನ್ ಸಿಂಗ್ ಭದೌರಿಯಾ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.