ಕೇಂದ್ರ ಬಜೆಟ್ 2024-25: ರಕ್ಷಣಾ ವಲಯಕ್ಕೆ 11 ಲಕ್ಷ ಕೋಟಿ ರೂ. ಅನುದಾನ
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು, ಪ್ರತಿ ಬಜೆಟ್ ಮಂಡನೆ ವೇಳೆಯೂ ರಕ್ಷಣಾ ವಲಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದರಂತೆ ಈ ಬಾರಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ವಲಯಕ್ಕೆ 11 ಲಕ್ಷ ಕೋಟಿ ರೂ ಮೀಸಲಿಟ್ಟಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು, ಪ್ರತಿ ಬಜೆಟ್ ಮಂಡನೆ ವೇಳೆಯೂ ರಕ್ಷಣಾ ವಲಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದರಂತೆ ಈ ಬಾರಿಯೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ವಲಯಕ್ಕೆ 11 ಲಕ್ಷ ಕೋಟಿ ರೂ ಮೀಸಲಿಟ್ಟಿದ್ದಾರೆ.
ಇದು ಕಳೆದ ಬಾರಿಗಿಂತ ಶೇ.11ರಷ್ಟು ಹೆಚ್ಚಾಗಿದೆ. ಇದು ಜಿಡಿಪಿಯ ಶೇ.3.4ರಷ್ಟಿದೆ. ಕಳೆದ ಬಜೆಟ್ನಲ್ಲಿ 5.93 ಲಕ್ಷ ಕೋಟಿ ರೂಪಾಯಿ ಮೀಸಲಿಸಲಾಗಿತ್ತು. ಇದು ಜಿಡಿಪಿಯ ಶೇ.1.9ರಷ್ಟಿತ್ತು.
ಸದ್ಯ ಜಗತ್ತಿನ ಎರಡು ಪ್ರದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಉಂಟಾಗಿದೆ. ಗಾಜಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಈ ಹಿನ್ನೆಲೆ ಬಜೆಟ್ನಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದು ರಕ್ಷಣಾ ತಜ್ಞ ಏರ್ವೇಸ್ ಮಾರ್ಷಲ್ ಮನೋಹರ್ ಬಹದ್ದೂರ್ ಅಭಿಪ್ರಾಯಪಟ್ಟಿದ್ದರು.
2022ರಲ್ಲಿ ಶಸ್ತ್ರಾಸ್ತ್ರಗಳಿಗಾಗಿಯೇ 1.52 ಲಕ್ಷ ಕೋಟಿ ರೂ. ಹಣವನ್ನು ಮೀಸಲಿಟ್ಟಿತ್ತು. ಇದರಲ್ಲೀಗ ಶೇ.6.5ರಷ್ಟು ಹೆಚ್ಚಳಗೊಂಡಿದೆ. 2022-23ರಲ್ಲಿ ಶೇ. 12 ಮತ್ತು 2021-22ರಲ್ಲಿ ಶೇ.19ರಷ್ಟಿತ್ತು.
ಸದ್ಯ ಭಾರತ 85 ದೇಶಗಳಿಗೆ ತನ್ನ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. 2016ಕ್ಕೆ ಹೋಲಿಸಿದರೆ ಭಾರತದ ರಕ್ಷಣಾ ರಫ್ತು 10 ಪಟ್ಟು ಹೆಚ್ಚಾಗಿದೆ. ನೌಕಾಪಡೆಗೆ 26 ರಫೇಲ್ ವಿಮಾನಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
31 MQ-9B ರೀಪರ್ ಡ್ರೋನ್‌ಗಳನ್ನು ಖರೀದಿಸಲು ಅಮೆರಿಕದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ ಸ್ಟ್ರೈಕರ್ ಶಸ್ತ್ರಸಜ್ಜಿತ ಯುದ್ಧ ವಾಹನವನ್ನು ನಿರ್ಮಿಸಲು ಒಪ್ಪಿಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


