ರಾಜ್ಯಸಭೆಯಲ್ಲಿ 'ಪ್ರಜಾಪ್ರಭುತ್ವ ದಮನ' ಸಾಮಾನ್ಯವಾಗಿದೆ: ಧಂಖರ್ ವಿರುದ್ಧ ಖರ್ಗೆ ಮತ್ತೆ ವಾಗ್ದಾಳಿ
ಜಗದೀಪ್ ಧಂಖರ್ ಅವರ ಪಕ್ಷಪಾತಿ ಧೋರಣೆಯನ್ನು ಪ್ರಶ್ನಿಸಿದ ಖರ್ಗೆ, ಸಭಾಪತಿಗಳು ಪ್ರತಿಪಕ್ಷಗಳ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು "ನಿರಂತರವಾಗಿ ದಮನ ಮಾಡುತ್ತಾ ಬಂದಿದ್ದಾರೆ.

ನವದೆಹಲಿ: ರಾಜ್ಯಸಭೆಯಲ್ಲಿ "ಪ್ರಜಾಪ್ರಭುತ್ವವನ್ನು ದಮನ" ಮಾಡುವುದು ಸಾಮಾನ್ಯ ಎನ್ನುವಂತಾಗಿದೆ ಎಂದು ಪ್ರತಿಪಾದಿಸಿದ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಸಭಾಪತಿ ಜಗದೀಪ್ ಧಂಖರ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜಗದೀಪ್ ಧಂಖರ್ ಅವರ ಪಕ್ಷಪಾತಿ ಧೋರಣೆಯನ್ನು ಪ್ರಶ್ನಿಸಿದ ಖರ್ಗೆ, ಸಭಾಪತಿಗಳು ಪ್ರತಿಪಕ್ಷಗಳ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು "ನಿರಂತರವಾಗಿ ದಮನ ಮಾಡುತ್ತಾ ಬಂದಿದ್ದಾರೆ. ಬೇಕೆಂದೇ ಸತಾಯಿಸುವುದು, ಅನಗತ್ಯವಾಗಿ ಒತ್ತಡ ಹಾಕುವುದು, ನ್ಯಾಯಯುತವಲ್ಲದ ಟೀಕೆಗಳನ್ನು ಮಾಡುವುದು. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಚರ್ಚೆಗೆ ನಿರಂತರವಾಗಿ ನಿರಾಕರಿಸುತ್ತಿದ್ದಾರೆ" ಎಂದು ಕಾಂಗ್ರೆಸ್ ಮುಖ್ಯಸ್ಥರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್ ಪಕ್ಷಗಳು ಧಂಖರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ರಾಜ್ಯಸಭೆಯಲ್ಲಿ ನೋಟಿಸ್ ಸಲ್ಲಿಸಿದ ನಂತರ ಖರ್ಗೆ, ಉಪ ರಾಷ್ಟ್ರಪತಿಗಳು "ಅತ್ಯಂತ ಪಕ್ಷಪಾತ" ಎಂದು ಮತ್ತೊಮ್ಮೆ ಕಟುವಾಗಿ ಟೀಕಿಸಿದ್ದಾರೆ.
ಇಂದು ಎಕ್ಸ್ನಲ್ಲಿ ಬರೆದ ಪೋಸ್ಟ್ನಲ್ಲಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ "ಮಾತನಾಡುವ ಹಕ್ಕು" ಮತ್ತು "ಅಭಿಪ್ರಾಯ ವ್ಯಕ್ತಪಡಿಸುವ" ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
"ರಾಜ್ಯಸಭೆಯಲ್ಲಿ 'ಪ್ರಜಾಪ್ರಭುತ್ವ ದಮನ ಮಾಡಲಾಗುತ್ತಿದೆ. ಸತ್ಯವನ್ನು ತುಳಿಯಲಾಗುತ್ತಿದೆ. ನಿರಂಕುಶಾಧಿಕಾರದ ರೂಢಿಯಾಗಿ ಮಾರ್ಪಟ್ಟಿರುವಾಗ... ಸ್ಥಾಪಿತ 'ಸಂಸದೀಯ ಪದ್ಧತಿಗಳ' ಮೇಲಿನ ಆಕ್ರಮಣವನ್ನು ಉತ್ತೇಜಿಸಲಾಗುತ್ತಿದೆ. 'ನೈತಿಕ ನಡವಳಿಕೆ' ರಾಜ್ಯಸಭೆಯಲ್ಲಿ ದಿವಾಳಿಯಾಗುತ್ತಿದೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



