ದೇಶ

Digital arrest: ಮಹಿಳೆಗೆ 1.4 ಲಕ್ಷ ರೂಪಾಯಿ ವಂಚನೆ

ನೋಯ್ಡಾ ಸೆಕ್ಟರ್ 77 ರ ನಿವಾಸಿ ಸ್ಮೃತಿ ಸೆಮ್ವಾಲ್ ಎಂಬುವವರಿಗೆ ಡಿಸೆಂಬರ್ 8 ರಂದು ಪ್ರಿಯಾ ಶರ್ಮಾ ಎಂಬ ಮಹಿಳೆ ಕರೆ ಮಾಡಿ ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ.

Digital arrest: ಮಹಿಳೆಗೆ 1.4 ಲಕ್ಷ ರೂಪಾಯಿ ವಂಚನೆ
ಡಿಜಿಟಲ್ ಅರೆಸ್ಟ್ (ಸಾಂಕೇತಿಕ ಚಿತ್ರ) — online desk
Published On :

ನೊಯ್ಡಾ: ಸೈಬರ್ ಕ್ರಿಮಿನಲ್ ಗಳು ಡಿಜಿಟಲ್ ಅರೆಸ್ಟ್ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 1.4 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.

5 ಗಂಟೆಗಳ ಕಾಲ ಮಹಿಳೆಯನ್ನು ಡಿಜಿಟಲ್ ಆರೆಸ್ಟ್ ನಲ್ಲಿಡಲಾಗಿತ್ತು. ಕಳೆದ ರಾತ್ರಿ ನೋಯ್ಡಾ ಸೆಕ್ಟರ್ 77 ರ ನಿವಾಸಿ ಸ್ಮೃತಿ ಸೆಮ್ವಾಲ್ ಎಂಬುವವರಿಗೆ ಡಿಸೆಂಬರ್ 8 ರಂದು ಪ್ರಿಯಾ ಶರ್ಮಾ ಎಂಬ ಮಹಿಳೆ ಕರೆ ಮಾಡಿ ಸೈಬರ್ ಕ್ರೈಂ ಬ್ರಾಂಚ್‌ನ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ.

ಆಕೆಯ ಆಧಾರ್ ಕಾರ್ಡ್ ಬಳಸಿ ಅಕ್ರಮ ಹಣ ವರ್ಗಾವಣೆ, ಮಾನವ ಕಳ್ಳಸಾಗಣೆ ಮತ್ತು ಮಾದಕ ದ್ರವ್ಯ ಸಾಗಣೆಯಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ಕರೆ ಮಾಡಿದವರು ಹೇಳಿದರು. ಸ್ಮೃತಿ ಅವರನ್ನು ಉನ್ನತ ಅಧಿಕಾರಿಗಳ ಬಳಿ ಮಾತನಾಡುವಂತೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಭಯದಿಂದ ಸಂತ್ರಸ್ತೆ ಎರಡು ಕಂತುಗಳಲ್ಲಿ 1.40 ಲಕ್ಷ ರೂ.ಗಳನ್ನು ಆರೋಪಿಗಳು ಹೇಳಿದ ಖಾತೆಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ತನ್ನನ್ನು 'ಡಿಜಿಟಲ್ ಬಂಧನ'ದಲ್ಲಿ ಇರಿಸಲಾಗಿತ್ತು ಮತ್ತು ನಂತರ ತಾನು ಸೈಬರ್ ವಂಚನೆಗೆ ಬಲಿಯಾಗಿದ್ದೇನೆ ಎಂದು ಅರಿವಾಯಿತು ಎಂದು ದೂರುದಾರರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.