ಹೈದರಾಬಾದ್ ನಲ್ಲೊಂದು ವಿಚಿತ್ರ: ರಸ್ತೆಯ ಒಂದು ಭಾಗದಲ್ಲಿ ಮಾತ್ರ ಮಳೆ, ಕಾರಣವೇನು?
ಹೈದರಾಬಾದ್ ನ ಮುರದ್ ನಗರದಲ್ಲಿ ಈ ವಿಚಿತ್ರ ಮಳೆಯಾಗಿದ್ದು, ನಿನ್ನೆ ರಾತ್ರಿ ಮುರದ್ ನಗರದ ಪ್ರಮುಖ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಮಳೆಯಾಗಿದೆ.

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ವಿಚಿತ್ರ ಮಳೆಯಾಗಿದ್ದು, ರಸ್ತೆಯ ಒಂದು ಭಾಗದಲ್ಲಿ ಮಾತ್ರ ಮಳೆಯಾಗುತ್ತಿದ್ದರೆ ಮತ್ತೊಂದು ಭಾಗದಲ್ಲಿ ಮಳೆಯೇ ಇಲ್ಲ.. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್ ನ ಮುರದ್ ನಗರದಲ್ಲಿ ಈ ವಿಚಿತ್ರ ಮಳೆಯಾಗಿದ್ದು, ನಿನ್ನೆ ರಾತ್ರಿ ಮುರದ್ ನಗರದ ಪ್ರಮುಖ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಮಳೆಯಾಗಿದೆ.
ಹೈದರಾಬಾದ್ ವೆದರ್ ಟಿವಿ ವರದಿ ಮಾಡಿರುವಂತೆ ಇದು ಅಪರೂಪದ ಪ್ರಕೃತಿ ವಿದ್ಯಮಾನವಾಗಿದ್ದು, ಸ್ಥಳೀಯ ತಾಪನ ಮತ್ತು ಹೆಚ್ಚಿದ ವಾಯು ಒತ್ತಡದಿಂದಾಗಿ ರೂಪುಗೊಂಡ ಕ್ಯುಮುಲಸ್ ಮೋಡಗಳು ಒಂದು ಪ್ರದೇಶದಲ್ಲಿ ಮಾತ್ರ ಮಳೆ ಸುರಿಸುತ್ತವೆ ಎಂದು ಹೇಳಿದೆ.
ಒಟ್ಟಾರೆ ಈ ವಿದ್ಯಮಾನ ಸ್ಥಳೀಯ ನಿವಾಸಗಳಲ್ಲೇ ಅಚ್ಚರಿಗೆ ಕಾರಣವಾಗಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



