ದೇಶ

ಜಾರ್ಖಂಡ್‌: ತರಬೇತಿ ವಿಮಾನ ನಾಪತ್ತೆ, ಪೈಲಟ್ ಮೃತದೇಹ ಪತ್ತೆ

ಖಾಸಗಿ ಒಡೆತನದ ಸೆಸ್ನಾ 152 ಎಂಬ ತರಬೇತುದಾರ ವಿಮಾನ ಮಂಗಳವಾರ ಬೆಳಗ್ಗೆ ಸೋನಾರಿ ಏರೋಡ್ರೋಮ್‌ನಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದೆ. ಬಳಿಕ ಜಲಾಶಯ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಮೆಗಾ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಜಾರ್ಖಂಡ್‌: ತರಬೇತಿ ವಿಮಾನ ನಾಪತ್ತೆ, ಪೈಲಟ್ ಮೃತದೇಹ ಪತ್ತೆ
ಶೋಧ ಕಾರ್ಯದ ಚಿತ್ರ
Published On :

ರಾಂಚಿ: ಜಾರ್ಖಂಡ್‌ನ ಜಮ್‌ಶೆಡ್‌ಪುರದಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದ್ದ ಎರಡು ಆಸನಗಳ ತರಬೇತಿ ವಿಮಾನದಲ್ಲಿದ್ದ ಪೈಲಟ್‌ನ ಶವ ಗುರುವಾರ ಚಾಂಡಿಲ್ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಒಡೆತನದ ಸೆಸ್ನಾ 152 ಎಂಬ ತರಬೇತುದಾರ ವಿಮಾನ ಮಂಗಳವಾರ ಬೆಳಗ್ಗೆ ಸೋನಾರಿ ಏರೋಡ್ರೋಮ್‌ನಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದೆ. ಬಳಿಕ ಜಲಾಶಯ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಮೆಗಾ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಮಾನ ಪತನಗೊಂಡಿರುವ ಶಂಕೆಯಿರುವ ಜಲಾಶಯದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಇಂದು ಬೆಳಗ್ಗೆ ಶವ ತೇಲುತ್ತಿರುವುದು ಪತ್ತೆಯಾಯಿತು. ಇದು ಸೆರೈಕೆಲಾ-ಖಾರ್ಸಾವನ್ ಜಿಲ್ಲೆಯ ಆದಿತ್ಯಪುರ ನಿವಾಸಿ ಟ್ರೈನಿ ಪೈಲಟ್ ಸುಭ್ರೋದೀಪ್ ದತ್ತಾ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.

ಈ ಮಧ್ಯೆ ಭಾರತೀಯ ನೌಕಾಪಡೆಯ ತಂಡ ನಾಪತ್ತೆಯಾಗಿರುವ ವಿಮಾದ ಪತ್ತೆಯಾ ಸೇರಿಕೊಂಡಿದೆ. ನೌಕಾಪಡೆಯ 19 ಸದಸ್ಯರ ತಂಡವನ್ನು ವಿಶಾಖಪಟ್ಟಣದಿಂದ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ, ಎನ್‌ಡಿಆರ್‌ಎಫ್‌ನ ಆರು ಸದಸ್ಯರ ತಂಡವು ಅಣೆಕಟ್ಟಿನ ಜಲಾಶಯದಲ್ಲಿ ಗಂಟೆಗಳ ಕಾಲ ಶೋಧ ನಡೆಸಿತು. ವಿಮಾನವು ಅದರೊಳಗೆ ಅಪ್ಪಳಿಸಿತು ಎಂದು ಗ್ರಾಮಸ್ಥರು ಹೇಳಿಕೊಂಡ ನಂತರ ಜಲಾಶಯವನ್ನು ಶೋಧಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಸೆರೈಕೆಲಾ-ಖಾರ್ಸಾವನ್) ಮುಖೇಶ್ ಕುಮಾರ್ ಲುನಾಯತ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.