ದೇಶ

ವ್ಯಾಪಕ ಪ್ರತಿಭಟನೆ, ಕಲ್ಲು ತೂರಾಟ, 'ರೈಲ್ ರೋಕೋ' ನಂತರ ಬದ್ಲಾಪುರ್ ರೈಲು ನಿಲ್ದಾಣ ಸಹಜ ಸ್ಥಿತಿಗೆ; ಸಂಚಾರ ಪುನಾರಂಭ

ಯಾವುದೇ ಅಹಿತಕರ ಘಟನೆ ಪುನರಾವರ್ತನೆ ಸಾಧ್ಯತೆಯಿರುವುದರಿಂದ ನಿನ್ನೆ ದುರ್ಘಟನೆ ನಡೆದ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ಇಂದು ತೀವ್ರ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.

ವ್ಯಾಪಕ ಪ್ರತಿಭಟನೆ, ಕಲ್ಲು ತೂರಾಟ, 'ರೈಲ್ ರೋಕೋ' ನಂತರ ಬದ್ಲಾಪುರ್ ರೈಲು ನಿಲ್ದಾಣ ಸಹಜ ಸ್ಥಿತಿಗೆ; ಸಂಚಾರ ಪುನಾರಂಭ
ನಿನ್ನೆ ರೈಲ್ ರೋಕೋ ಪ್ರತಿಭಟನೆ ಸಂದರ್ಭ
Published On :

ಬದ್ಲಾಪುರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರ್ ನಲ್ಲಿ ತೀವ್ರ ಪ್ರತಿಭಟನೆ ನಡೆಸಿ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ರೈಲು ಸಂಚಾರ ತಡೆದು ಕಲ್ಲು ತೂರಾಟಕ್ಕೆ ಕಾರಣವಾಗಿದ್ದ ಖಾಸಗಿ ಶಾಲೆಯ ನರ್ಸರಿ ತರಗತಿಯ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದ ಮರುದಿನವಾದ ಇಂದು ಬುಧವಾರ ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ.

ಯಾವುದೇ ಅಹಿತಕರ ಘಟನೆ ಪುನರಾವರ್ತನೆ ಸಾಧ್ಯತೆಯಿರುವುದರಿಂದ ನಿನ್ನೆ ದುರ್ಘಟನೆ ನಡೆದ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ಇಂದು ತೀವ್ರ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಶಾಲೆಯೊಂದರಲ್ಲಿ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಡೆದ ತೀವ್ರ 'ರೈಲ್ ರೋಕೋ' ಪ್ರತಿಭಟನೆಯ ಒಂದು ದಿನದ ನಂತರ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ಪರಿಸ್ಥಿತಿ ಇಂದು ಸಹಜ ಸ್ಥಿತಿಗೆ ಮರಳಿದೆ.

ವಾಶ್‌ರೂಮ್‌ನಲ್ಲಿ ಶಾಲಾ ಸ್ವೀಪರ್‌ನಿಂದ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಿನ್ನೆ ಮಂಗಳವಾರ ಸಾವಿರಾರು ಪ್ರತಿಭಟನಾಕಾರರು ಬದ್ಲಾಪುರ್ ನಿಲ್ದಾಣದಲ್ಲಿ ರೈಲು ಹಳಿಗಳನ್ನು ತಡೆದರು, ಇದು ಸ್ಥಳೀಯ ರೈಲು ಸೇವೆಗಳಿಗೆ ಭಾರಿ ಅಡ್ಡಿಯುಂಟಾಗಿತ್ತು ಮತ್ತು ಕೆಲವು ದೂರದ ರೈಲುಗಳ ಮಾರ್ಗವನ್ನು ಬೇರೆಡೆಗೆ ತಿರುಗಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.