ದೇಶ

Gate falls on Baby: ಮಕ್ಕಳ ಅಚಾತುರ್ಯ, ಮಗುವಿನ ಮೇಲೆ ಗೇಟ್ ಬಿದ್ದು ದಾರುಣ ಸಾವು! Video

ಮಹಾರಾಷ್ಟ್ರದ ಪುಣೆ ನಗರದ ಪಿಂಪ್ರಿ ಚಿಂಚ್‌ವಾಡ್‌(Pimpri-Chinchwad)ನ ಬೊಪ್ಖೇಲ್ ಪ್ರದೇಶದ ಗಣೇಶ್ ನಗರದಲ್ಲಿ ಈ ದಾರುಣ ಘಟನೆ ವರದಿಯಾಗಿದ್ದು, ಮಗು ಮೇಲೆ ಗೇಟ್ ಬಿದ್ದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Gate falls on Baby: ಮಕ್ಕಳ ಅಚಾತುರ್ಯ, ಮಗುವಿನ ಮೇಲೆ ಗೇಟ್ ಬಿದ್ದು ದಾರುಣ ಸಾವು! Video
ಗೇಟ್ ಬಿದ್ದು ಮಗು ಸಾವು
Published On :

ಪುಣೆ: ಪುಟ್ಟ ಮಕ್ಕಳ ಅಚಾತುರ್ಯಕ್ಕೆ ರಸ್ತೆಯಲ್ಲಿ ಸಾಗುತ್ತಿದ್ದ ಮಗುವಿನ ಮೇಲೆ ಗೇಟ್ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪುಣೆ ನಗರದ ಪಿಂಪ್ರಿ ಚಿಂಚ್‌ವಾಡ್‌(Pimpri-Chinchwad)ನ ಬೊಪ್ಖೇಲ್ ಪ್ರದೇಶದ ಗಣೇಶ್ ನಗರದಲ್ಲಿ ಈ ದಾರುಣ ಘಟನೆ ವರದಿಯಾಗಿದ್ದು, ಮಗು ಮೇಲೆ ಗೇಟ್ ಬಿದ್ದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆಯ ಹೊರಗೆ ಇಬ್ಬರು ಪುಟ್ಟ ಮಕ್ಕಳು ಸೈಕಲ್ ನಲ್ಲಿ ಬಂದು ಮನೆಯ ಗೇಟ್ ಅನ್ನು ತೆರೆದು ಒಳಗೆ ಹೋಗುತ್ತಾರೆ. ಸೈಕಲ್ ಒಳಗೆ ಹೋಗುತ್ತಿದ್ದಂತೆಯೇ ಮತ್ತೋಂದು ಮಗು ಸ್ಲೈಡಿಂಗ್ ಗೇಟ್ ಅನ್ನು ಜೋರಾಗಿ ಎಳೆಯುತ್ತದೆ. ಈ ವೇಳೆ ಗೇಟ್ ಹಿಂದಿನ ಲಾಕ್ ಬಿಡಿಸಿಕೊಂಡು ಮುಂದೆ ಹೋಗಿದೆ. ಅದೇ ಸಮಯದಲ್ಲಿ ಪುಟ್ಟ ಬಾಲಕಿಯೊಬ್ಬಳು ಮಗುವನ್ನು ಕೈ ಹಿಡಿದು ಕರೆ ತರುತ್ತಿದ್ದಾಗ ಗೇಟ್ ಏಕಾಏಕಿ ಮಗುವಿನ ತಲೆ ಮೇಲೆ ಬೀಳುತ್ತದೆ.

ಭಾರವಾದ ಗೇಟ್ ಮಗುವಿನ ತಲೆ ಮೇಲೆ ಬೀಳುತ್ತಳೆ ಮಕ್ಕಳು ಭಯದಿಂದ ಕೂಗಿ ಓಡುತ್ತಾರೆ. ಬಳಿಕ ಮಗುವಿನ ಕಿರುಚಾಟ ಕೇಳುತ್ತಿದ್ದಂತೆ ಸ್ಥಳೀಯರು ಓಡೋಡಿ ಬಂದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ.

ಪೊಲೀಸರಿಂದ ಬಂದ ಮಾಹಿತಿ ಪ್ರಕಾರ ಸ್ಥಳೀಯ ಶಿಂಧೆ ಕುಟುಂಬದಲ್ಲಿ ಈ ಅವಘಡ ಸಂಭವಿಸಿದ್ದು, ಮೃತ ಮಗುವಿನ ಹೆಸರು ಗಿರಿಜಾ, ತಂದೆ ಗಣೇಶ ಶಿಂಧೆ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.