ಹಮಾಸ್ ಉಗ್ರ ಸಂಘಟನೆ ಎಂದು ಘೋಷಿಸಿ: ಭಾರತಕ್ಕೆ ಇಸ್ರೇಲ್ ಒತ್ತಾಯ
ಇತರ ಹಲವು ರಾಷ್ಟ್ರಗಳು ಮಾಡಿರುವಂತೆ ಹಮಾಸ್ ಉಗ್ರ ಸಂಘಟನೆ ಎಂದು ಭಾರತ ನಿಷೇಧಿಸುವ ಸಮಯ ಬಂದಿದೆ ಎಂದು ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಬುಧವಾರ ಹೇಳಿದ್ದಾರೆ.

ನವದೆಹಲಿ: ಇತರ ಹಲವು ರಾಷ್ಟ್ರಗಳು ಮಾಡಿರುವಂತೆ ಹಮಾಸ್ ಉಗ್ರ ಸಂಘಟನೆ ಎಂದು ಭಾರತ ನಿಷೇಧಿಸುವ ಸಮಯ ಬಂದಿದೆ ಎಂದು ಇಸ್ರೇಲಿ ರಾಯಭಾರಿ ನೌರ್ ಗಿಲೋನ್ ಬುಧವಾರ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಇಸ್ರೇಲಿ ರಾಯಭಾರಿ, ಹಮಾಸ್ ವಿರುದ್ಧದ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇಸ್ರೇಲ್‌ಗೆ ಶೇ.100 ರಷ್ಟು ಬೆಂಬಲ ನೀಡಿದ್ದಕ್ಕೆ ಭಾರತಕ್ಕೆ ಧನ್ಯವಾದ ಅರ್ಪಿಸಿದರು. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಕ್ರೂರ ದಾಳಿ ನಡೆಸಿದ ನಂತರ ಹಮಾಸ್ ಉಗ್ರ ಸಂಘಟನೆ ಎಂದು ಘೋಷಿಸಲು ಇಸ್ರೇಲ್ ಸಂಬಂಧಿತ ಭಾರತೀಯ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದರು.
ಈ ವಿಷಯವನ್ನು ಮೊದಲೇ ಹೇಳಲಾಗಿತ್ತು ಎಂದ ಅವರು, ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮೊದಲ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಭಾರತ ಜಗತ್ತಿನಲ್ಲಿ ಬಹಳ ಪ್ರಮುಖ ನೈತಿಕ ಧ್ವನಿಯಾಗಿದೆ. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತ ನಮಗೆ ದೃಢವಾಗಿ ಬೆಂಬಲ ನೀಡುತ್ತಿದೆ. ಅಲ್ಲದೇ ಪ್ರಮುಖ ದೇಶಗಳು ನಮ್ಮೊಂದಿಗಿವೆ ಎಂದು ಗಿಲೋನ್ ತಿಳಿಸಿದರು.
ಅಕ್ಟೋಬರ್ 7 ರಂದು ಗಾಜಾದಿಂದ ಹಮಾಸ್ ಉಗ್ರಗಾಮಿಗಳು ದಾಳಿ ನಡೆಸಿದ ನಂತರ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಪ್ರತಿದಾಳಿಯಿಂದಾಗಿ ಉಭಯ ರಾಷ್ಟ್ರಗಳ ನಡುವೆ ಯುದ್ಧವೇರ್ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


