ನೇಪಾಳ ಸೇರಿ ಏಳು ದೇಶಗಳಿಗೆ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ
ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ ಏಳು ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿರುವುದಾಗಿ ಸರ್ಕಾರ ಬುಧವಾರ ತಿಳಿಸಿದೆ.

ನವದೆಹಲಿ: ನೇಪಾಳ, ಕ್ಯಾಮರೂನ್ ಮತ್ತು ಮಲೇಷ್ಯಾ ಸೇರಿದಂತೆ ಏಳು ದೇಶಗಳಿಗೆ 10,34,800 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಲು ಅನುಮತಿ ನೀಡಿರುವುದಾಗಿ ಸರ್ಕಾರ ಬುಧವಾರ ತಿಳಿಸಿದೆ.
ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್ಸಿಇಎಲ್) ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.
ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಜುಲೈ 20ರಂದು ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ರಫ್ತನ್ನು ನಿಷೇಧಿಸಲಾಗಿದೆಯಾದರೂ, ಕೆಲವು ದೇಶಗಳಿಗೆ ಅವುಗಳ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ಮನವಿ ಮೇರೆಗೆ ಸರ್ಕಾರ ಈ ರಫ್ತುಗಳಿಗೆ ಅನುಮತಿ ನೀಡಿದೆ.
'ನೇಪಾಳ, ಕ್ಯಾಮರೂನ್, ಕೋಟ್ ಡಿ' ಐವೋರ್, ಗಿನಿಯಾ, ಮಲೇಷಿಯಾ, ಫಿಲಿಪೈನ್ಸ್ ಮತ್ತು ಸೀಶೆಲ್ಸ್ ದೇಶಗಳಿಗೆ ಬಿಳಿ ಅಕ್ಕಿ ರಫ್ತು ಮಾಡಲು ಸೂಚಿಸಲಾಗಿದೆ' ಎಂದು ಅದು ಹೇಳಿದೆ.
ಇದನ್ನೂ ಓದಿ: ಭಾರತದಿಂದ ಅಕ್ಕಿ ರಫ್ತು ಕಡಿತ: ಅಮೆರಿಕದಲ್ಲಿ ತಲ್ಲಣ, ಮಾಲ್ ಗಳಿಗೆ ಮುಗಿಬೀಳುತ್ತಿರುವ ಅನಿವಾಸಿ ಭಾರತೀಯರು, ನಿಜಾಂಶವೇನು?
ನೇಪಾಳಕ್ಕೆ 95,000 ಟನ್, ಕ್ಯಾಮರೂನ್ (1,90,000 ಟನ್), ಕೋಟ್ ಡಿ ಐವೊರ್ (1,42,000 ಟನ್), ಗಿನಿಯಾ (1,42,000 ಟನ್), ಮಲೇಷ್ಯಾ (1,70,000 ಟನ್), ಫಿಲಿಪೈನ್ಸ್ (2,95,000 ಟನ್) ಮತ್ತು ಸೀಶೆಲ್ಸ್ ದೇಶಕ್ಕೆ 800 ಟನ್ ಅಕ್ಕಿ ರಫ್ತಿಗೆ ಅನುಮತಿ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


