ಕರ್ನಾಟಕ ಚುನಾವಣೆ: ಒಟ್ಟು 375 ಕೋಟಿ ರೂ. ನಗದು, ವಸ್ತು ವಶ; ಕಳೆದ ಬಾರಿಗಿಂತ 4.5 ಪಟ್ಟು ಹೆಚ್ಚಳ!
ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನಾ ಒಟ್ಟು 375 ಕೋಟಿ ರೂಪಾಯಿ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ ಮತ್ತು ದಕ್ಷಿಣ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಜಾರಿ ನಿರ್ದೇಶನಾಲಯ 288 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ನವದೆಹಲಿ: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನಾ ಒಟ್ಟು 375 ಕೋಟಿ ರೂಪಾಯಿ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ ಮತ್ತು ದಕ್ಷಿಣ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಜಾರಿ ನಿರ್ದೇಶನಾಲಯ 288 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಚುನಾವಣಾ ಆಯೋಗ ಈ ಮಾಹಿತಿ ಬಹಿರಂಗಪಡಿಸಿದೆ. 2018 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಗಮನಾರ್ಹ ರೀತಿಯಲ್ಲಿ 4.5 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ. ಕಟ್ಟುನಿಟ್ಟಾದ ಮುಂಜಾಗ್ರತೆ, ವ್ಯಾಪಕ ಮೇಲ್ವಿಚಾರಣೆ, ನೆರೆಯ ರಾಜ್ಯಗಳೊಂದಿಗೆ ಸಮನ್ವಯತೆ ಮತ್ತು ಅಂತರ ಸಂಸ್ಥೆಗಳ ಸಮನ್ವಯದಿಂದ ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಅಕ್ರಮ ವಸ್ತುಗಳ ಸಾಗಟ ಕುರಿತು ಪರಿಶೀಲಿಸಲಾಗಿದ್ದು, 147.46 ಕೋಟಿ ರೂ. ನಗದು ಮತ್ತು 83.66 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಸಮಿತಿ ತಿಳಿಸಿದೆ.
ಇದರಲ್ಲಿ 23.6 ಕೋಟಿ ಮೌಲ್ಯದ ಔಷಧಗಳು, 96.6 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು ಮತ್ತು 24.21 ಕೋಟಿ ಮೌಲ್ಯದ ಉಡುಗೊರೆಗಳು ಸೇರಿವೆ. 2023ರಲ್ಲಿ ಒಟ್ಟು 375 ಕೋಟಿ ರೂ.ಗೂ ಅಧಿಕ ಮೊತ್ತದ ನಗದು ಹಾಗೂ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದು 2018ರ ವಿಧಾನಸಭೆ ಚುನಾವಣೆಗೆ ( 83.93 ಕೋಟಿ ರೂ) ಹೋಲಿಸಿದರೆ 4.5 ಪಟ್ಟು ಹೆಚ್ಚಾಗಿದೆ.
ಅಲ್ಲದೇ ಮಾರ್ಚ್ ಎರಡನೇ ವಾರದಲ್ಲಿ ಆಯೋಗದ ಭೇಟಿಯ ದಿನಾಂಕದಿಂದ ಚುನಾವಣೆಯ ಘೋಷಣೆಯ ದಿನಾಂಕದವರೆಗೆ, 83.78 ಕೋಟಿ ರೂಪಾಯಿಗಳನ್ನು ವಿವಿಧ ಜಾರಿ ಸಂಸ್ಥೆಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ 288 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ ಎಂದು ಇಸಿ ಹೇಳಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ 4.04 ಕೋಟಿ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಬೀದರ್ ಜಿಲ್ಲೆಯಲ್ಲಿ 100 ಕೆಜಿ ಗಾಂಜಾ ವಶಪಡಿಸಿಕೊಳ್ಳುವುದು ಸೇರಿದಂತೆ ಗಮನಾರ್ಹವಾದ ಮದ್ಯ ವಶಪಡಿಸಿಕೊಳ್ಳಲಾಗಿದೆ .ಕಲ್ಬುರ್ಗಿ, ಚಿಕ್ಕಮಂಗಳೂರು ಮತ್ತು ಇತರ ಜಿಲ್ಲೆಗಳಿಂದ ಸೀರೆಗಳು ಮತ್ತು ಆಹಾರ ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಲಹೊಂಗಲ ಮತ್ತು ಕುಣಿಗಲ್ ಮತ್ತಿತರ ಕಡೆಗಳಿಂದ ಅಪಾರ ಸಂಖ್ಯೆಯ ಪ್ರೆಶರ್ ಕುಕ್ಕರ್ ಮತ್ತು ಅಡುಗೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
ಸಮಿತಿಯು 146 ವೆಚ್ಚ ವೀಕ್ಷಕರನ್ನು ನಿಯೋಜಿಸಿತ್ತು ಮತ್ತು 81 ವಿಧಾನಸಭಾ ಕ್ಷೇತ್ರಗಳನ್ನು ವೆಚ್ಚದ ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡಿನ ಗಡಿ ಚೆಕ್ ಪೋಸ್ಟ್‌ಗಳ ಮೂಲಕ ಕಾನೂನು ಸುವ್ಯವಸ್ಥೆ ಮತ್ತು ಅಂತರರಾಜ್ಯ ಸಾಗಾಟದ ಮೇಲೆ ನಿಗಾ ವಹಿಸಿತ್ತು. ಅಂತಹ ಗಡಿ ಚೆಕ್‌ಪೋಸ್ಟ್‌ಗಳಿಂದ ನಗದು, ಮದ್ಯ, ಡ್ರಗ್ಸ್, ಅಮೂಲ್ಯ ಲೋಹಗಳು ಮತ್ತು ಉಡುಗೊರೆ ವಸ್ತುಗಳು ಸೇರಿದಂತೆ ಸುಮಾರು 70 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯೋಗ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


