ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಲು ಯತ್ನ; ಸುಳ್ಳು ಕೇಸ್ ದಾಖಲು!
ಕಾನೂನು ವ್ಯಾಸಂಗ ಮಾಡುತ್ತಿರುವ 22 ವರ್ಷದ ಉತ್ತರ ಪ್ರದೇಶ ಮೂಲದ ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಲು ಯತ್ನಿಸಲಾಗಿದ್ದು, ಆತನನ್ನು ಗ್ರೇಟರ್ ನೋಯ್ಡಾದ ಪೊಲೀಸರು ಥಳಿಸಿ ಸುಳ್ಳು ಕೇಸ್ ದಾಖಲಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ಕಾನೂನು ವ್ಯಾಸಂಗ ಮಾಡುತ್ತಿರುವ 22 ವರ್ಷದ ಉತ್ತರ ಪ್ರದೇಶ ಮೂಲದ ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಲು ಯತ್ನಿಸಲಾಗಿದ್ದು, ಆತನನ್ನು ಗ್ರೇಟರ್ ನೋಯ್ಡಾದ ಪೊಲೀಸರು ಥಳಿಸಿ ಸುಳ್ಳು ಕೇಸ್ ದಾಖಲಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ದ್ವಿತೀಯ ವರ್ಷದ ಬಿಎ ಎಲ್ಎಲ್ ಬಿ ವಿದ್ಯಾರ್ಥಿಯಾಗಿರುವ ಈ ವಿದ್ಯಾರ್ಥಿಗೆ ಪೊಲೀಸರೇ ಮೂತ್ರ ಕುಡಿಸಲು ಯತ್ನಿಸಿರುವುದು ಮತ್ತೊಂದು ಹೇಯ ಕೃತ್ಯವಾಗಿದೆ. ಈ ಘಟನೆ ಗೌತಮ್ ಬುದ್ಧ ನಗರ ಜಿಲ್ಲೊಯ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ವರದಿಯಾಗಿದೆ.
ಪೊಲೀಸರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಯೂ ಆಗಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಗ್ರೇಟರ್ ನೊಯ್ಡಾ) ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗೌತಮ್ ಬುದ್ಧ ನಗರ ಪೊಲೀಸರಿಗೆ ಈ ವಿದ್ಯಾರ್ಥಿ ಆ ಪ್ರದೇಶದಲ್ಲಿ ಸ್ಪಾ ಹಾಗೂ ಮಸಾಜ್ ಕೇಂದ್ರದ ಹೆಸರಿನಲ್ಲಿ ಸೆಕ್ಸ್ ದಂಧೆ ನಡೆಯುತ್ತಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಈ ಸ್ಪಾ ಹಾಗೂ ಮಸಾಜ್ ಕೇಂದ್ರದ ಮಾಲಕಿಯನ್ನು ಬಂಧಿಸಿದ್ದರು. ಇದು 2021 ರಲ್ಲಿ ನಡೆದ ಘಟನೆಯಾಗಿದ್ದು, ನನ್ನ ಸ್ನೇಹಿತರೇ ಆಗಿದ್ದ ಮಹಿಳೆ ಮತ್ತು ಆಕೆಯ ಪತಿ ನನ್ನ ವಿರುದ್ಧ ಸುಲಿಗೆಯ ಸುಳ್ಳು ಆರೋಪ ಹೊರಿಸಿದ್ದರು ಪೊಲೀಸರು ಕಳೆದ ವರ್ಷ ನನ್ನನ್ನು ಬಂಧಿಸಿ ರಕ್ತ ಬರುವಂತೆ ಥಳಿಸಿದ್ದರು. ಅಷ್ಟೇ ಅಲ್ಲದೇ ಕುಡಿಯಲು ನೀರು ಕೇಳಿದಾಗ ಮೂತ್ರವನ್ನು ನೀಡಿ ಕುಡಿಸಲು ಯತ್ನಿಸಿದ್ದರು ಎಂದು ಯುವಕ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


