ಮಣಿಪುರ ಹಿಂಸಾಚಾರ ಕುರಿತು ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ: ಕಲಾಪ ಮಧ್ಯಾಹ್ನ 2-30ಕ್ಕೆ ಮುಂದೂಡಿಕೆ
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ರಾಜ್ಯಸಭೆಯಲ್ಲಿ ಇಂದು ಗದ್ದಲ, ಕೋಲಾಹಲ ಉಂಟಾದ ನಂತರ ಕಡತದಿಂದ ಕೆಲ ಪದಗಳನ್ನು ಕಿತ್ತುಹಾಕಿದ ಸಭಾಪತಿ, ಕಲಾಪವನ್ನು ಮಧ್ಯಾಹ್ನ2-30ರವರೆಗೂ ಮುಂದೂಡಿದರು.

ನವದೆಹಲಿ: ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ರಾಜ್ಯಸಭೆಯಲ್ಲಿ ಇಂದು ಗದ್ದಲ, ಕೋಲಾಹಲ ಉಂಟಾದ ನಂತರ ಕಡತದಿಂದ ಕೆಲ ಪದಗಳನ್ನು ಕಿತ್ತುಹಾಕಿದ ಸಭಾಪತಿ, ಕಲಾಪವನ್ನು ಮಧ್ಯಾಹ್ನ2-30ರವರೆಗೂ ಮುಂದೂಡಿದರು. ಗುರುವಾರದ ಕಲಾಪದ ಕಡತದಿಂದ ಕೆಲವು ಪದಗಳನ್ನು ತೆಗೆದುಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಡೆರೆಕ್ ಓ ಬ್ರಿಯಾನ್ ಪ್ರಶ್ನೆ ಎತ್ತಲು ಬಯಸುತ್ತಿದ್ದಂತೆಯೇ ಸಭಾಪತಿ ಜಗದೀಪ್ ಧನಕರ್ ಅವರು ಕಲಾಪವನ್ನು ಮುಂದೂಡಿದರು.
ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ದಿನವು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಹಾಗೂ ಈಶಾನ್ಯ ರಾಜ್ಯದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊ ಬಗ್ಗೆ ಸರ್ಕಾರ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ವಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆಯೇ ಮೊದಲ ದಿನ ವ್ಯರ್ಥವಾದಾಗ ಆ ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆ ಕೋರಿ ಓ ಬ್ರಿಯಾನ್ ಮಾಡಿದ ಉಲ್ಲೇಖಗಳನ್ನು ಸಭಾಪತಿ ಕಡತದಿಂದ ತೆಗದುಹಾಕಿದರು.
ಇಂದು ಕೂಡಾ ಆ ಪದಗಳನ್ನು ತೆಗೆದುಹಾಕುವ ಬಗ್ಗೆ ಪ್ರಶ್ನೆ ಎತ್ತಲು ಓಬ್ರಿಯಾನ್ ಪ್ರಯತ್ನಿಸಿದರು. ನಿನ್ನೆ ತಾವು ಮಾತನಾಡಿದ ಮೂರು ಪದಗಳನ್ನು ಕಡತದಿಂದ ತೆಗೆದುಹಾಕಲಾಗಿದೆ.ಮಣಿಪುರದ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ನಾನು ಹೇಳಿರುವುದಾಗಿ ಪಾಯಿಂಟ್ ಆಫ್ ಅರ್ಡರ್ ನಲ್ಲಿ ಪದೇ ಪದೇ ತಾವು ಬಳಸಿದ ಪದಗಳ ಅರ್ಥವನ್ನು ವಿವರಿಸಲು ಅವರು ಪ್ರಯತ್ನಿಸುತ್ತಿದ್ದಂತೆ ಸದನ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ಈ ಹಂತದಲ್ಲಿ ಸಭಾಪತಿ ಜಗದೀಪ್ ಧನಕರ್ ಅವರು ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


