ಆಗಸ್ಟ್ 20ರಿಂದ ಟೊಮೆಟೊ ಪ್ರತಿ ಕೆ.ಜಿ 40 ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧಾರ
ರಾಷ್ಟ್ರೀಯ ಸಹಕಾರಿ ಗ್ರಾಹಕರ ಭಾರತೀಯ ಫೆಡರೇಷನ್ ಲಿಮಿಟೆಡ್ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಭಾರತೀಯ ಫೆಡರೇಷನ್ ಲಿಮಿಟೆಡ್ (NAFED) ನಾಳೆ ಅಂದರೆ ಆಗಸ್ಟ್ 20 ರಿಂದ ಪ್ರತಿ ಕಿಲೋಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿವೆ.

ನವದೆಹಲಿ: ರಾಷ್ಟ್ರೀಯ ಸಹಕಾರಿ ಗ್ರಾಹಕರ ಭಾರತೀಯ ಫೆಡರೇಷನ್ ಲಿಮಿಟೆಡ್ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಭಾರತೀಯ ಫೆಡರೇಷನ್ ಲಿಮಿಟೆಡ್ (NAFED) ನಾಳೆ ಅಂದರೆ ಆಗಸ್ಟ್ 20 ರಿಂದ ಪ್ರತಿ ಕಿಲೋಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿವೆ.
ಮೊನ್ನೆ ಆಗಸ್ಟ್ 15 ರಂದು ಸರ್ಕಾರವು ಟೊಮೆಟೊ ಬೆಲೆಯನ್ನು 50 ರೂಪಾಯಿಗೆ ಇಳಿಸಿದ ನಂತರ ಇತ್ತೀಚಿನ ನಿರ್ದೇಶನದ ಪ್ರಕಾರ 40 ರೂಪಾಯಿಗೆ ಇಳಿಸಲಾಗಿದೆ. ಕಳೆದ ತಿಂಗಳಿನಿಂದ, NCCF ಮತ್ತು NAFED ಬೆಲೆ ಏರಿಕೆಯನ್ನು ತಡೆಯಲು ಗ್ರಾಹಕ ವ್ಯವಹಾರಗಳ ಸಚಿವಾಲಯದ ಪರವಾಗಿ ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿದೆ.
ಆರಂಭದಲ್ಲಿ, ಸಬ್ಸಿಡಿ ದರವನ್ನು ಪ್ರತಿ ಕಿಲೋಗ್ರಾಂಗೆ 90 ರೂಪಾಯಿಗೆ ನಿಗದಿಪಡಿಸಲಾಯಿತು, ಇದು ಗ್ರಾಹಕರಿಗೆ ಪ್ರಯೋಜನಗಳನ್ನು ಖಾತರಿಪಡಿಸುವ ಸಲುವಾಗಿ ಬೆಲೆಗಳಲ್ಲಿನ ಇಳಿಕೆಗೆ ಅನುಗುಣವಾಗಿ ಸತತವಾಗಿ ಕಡಿಮೆಯಾಯಿತು.
ಆಗಸ್ಟ್ 15 ರಂದು ಪ್ರತಿ ಕೆಜಿಗೆ 50 ರೂಪಾಯಿ ಚಿಲ್ಲರೆ ಬೆಲೆಯ ಕೊನೆಯ ಇಳಿಕೆಯ ಪರಿಷ್ಕರಣೆಯಾಗಿದೆ, ಇದು ಈಗ ಪ್ರತಿ ಕೆಜಿಗೆ 40 ರೂಪಾಯಿ ಆಗಿದ್ದು ನಾಳೆಯಿಂದ ಜಾರಿಗೆ ಬರಲಿದೆ. ಇಲ್ಲಿಯವರೆಗೆ, ಎರಡು ಏಜೆನ್ಸಿಗಳಿಂದ 15 ಲಕ್ಷ ಕಿಲೋಗ್ರಾಂಗಳಷ್ಟು ಟೊಮೆಟೊಗಳನ್ನು ಸಂಗ್ರಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


