ಭಾರತ-ಸೌದಿ ನಡುವೆ 24 ಒಪ್ಪಂದಗಳಿಗೆ ಸಹಿ!
ಭಾರತ-ಸೌದಿ ಇಂದು 24 ಒಪ್ಪಂದಗಳಿಗೆ ಸಹಿ ಹಾಕಿವೆ. ಮಾಹಿತಿ ತಂತ್ರಜ್ಞಾನ, ಕೃಷಿ, ಔಷಧ (ಫಾರ್ಮಾಸ್ಯುಟಿಕಲ್ಸ್), ಪೆಟ್ರೋಕೆಮಿಕಲ್ಸ್ ಮತ್ತು ಮಾನವ ಸಂಪನ್ಮೂಲಗಳು ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದಾಗಿದೆ.

ನವದೆಹಲಿ: ಭಾರತ-ಸೌದಿ ಇಂದು 24 ಒಪ್ಪಂದಗಳಿಗೆ ಸಹಿ ಹಾಕಿವೆ. ಮಾಹಿತಿ ತಂತ್ರಜ್ಞಾನ, ಕೃಷಿ, ಔಷಧ (ಫಾರ್ಮಾಸ್ಯುಟಿಕಲ್ಸ್), ಪೆಟ್ರೋಕೆಮಿಕಲ್ಸ್ ಮತ್ತು ಮಾನವ ಸಂಪನ್ಮೂಲಗಳು ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದಾಗಿದೆ.
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಹೆಚ್ ಪಿ, ವಿಎಫ್ಎಸ್ ಗ್ಲೋಬಲ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಉಭಯ ರಾಷ್ಟ್ರಗಳ ಖಾಸಗಿ ಸಂಸ್ಥೆಗಳ ನಡುವೆಯೂ ಒಪ್ಪಂದ ನಡೆದಿದೆ.
ಎಂಒಯುಗಳನ್ನು ಇನ್ವೆಸ್ಟ್ ಇಂಡಿಯಾ ಹಾಗೂ ಸೌದಿ ಅರೇಬಿಯಾದ ಹೂಡಿಕೆ ಸಚಿವಾಲಯ ಸುಗಮಗೊಳಿಸಿದ್ದು ಜಿ-20 ಸಭೆ ಬಳಿಕ ನಡೆದ ಸಭೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಸೌದಿ ಪ್ರಿನ್ಸ್ ಶನಿವಾರ ಮೂರು ದಿನಗಳ ಭೇಟಿಗಾಗಿ ದೆಹಲಿಗೆ ಆಗಮಿಸಿದ್ದರು. ಸಂಕ್ಷಿಪ್ತ ಹೇಳಿಕೆಯಲ್ಲಿ, ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಜಿ-20 ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದರು.
"ನಮ್ಮ ದೇಶಗಳು, ಜಿ 20 ದೇಶಗಳು ಮತ್ತು ಇಡೀ ಜಗತ್ತಿಗೆ ಪ್ರಯೋಜನವನ್ನು ತರುವಂತಹ ಬಹಳಷ್ಟು ಘೋಷಣೆಗಳನ್ನು ಮಾಡಲಾಗಿದೆ. ಹಾಗಾಗಿ ಅತ್ಯುತ್ತಮ ಸಭೆ ನಡೆಸಲಾಗಿದೆ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ, ಮತ್ತು ಉಭಯ ದೇಶಗಳಿಗೆ ಭವಿಷ್ಯವನ್ನು ಸೃಷ್ಟಿಸುವತ್ತ ಕೆಲಸ ಮಾಡುತ್ತೇವೆ" ಎಂದು ಸೌದಿ ಪ್ರಿನ್ಸ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


