ಜಿ20 ಶೃಂಗಸಭೆ: ಪ್ರಧಾನಿ ಮೋದಿ ಎದುರು ಇಂಡಿಯಾ ಬದಲಿಗೆ 'ಭಾರತ್' ಹೆಸರಿನ ನಾಮಫಲಕ!
ಇಂಡಿಯಾ ಹೆಸರು ಬದಲಾವಣೆ ವಿಚಾರ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿಯೂ ಇಂಡಿಯಾ ಬದಲಿಗೆ 'ಭಾರತ್ ''ಹೆಸರಿನ ಪ್ರಸ್ತಾಪ ಬಂದಿದೆ.

ನವದೆಹಲಿ: ಇಂಡಿಯಾ ಹೆಸರು ಬದಲಾವಣೆ ವಿಚಾರ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿಯೂ ಇಂಡಿಯಾ ಬದಲಿಗೆ 'ಭಾರತ್ ''ಹೆಸರಿನ ಪ್ರಸ್ತಾಪ ಬಂದಿದೆ.
ಇಂದು ಜಿ-20 ಶೃಂಗಸಭೆಯನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾಗ ದೇಶದ ಹೆಸರನ್ನು 'ಭಾರತ್'' ಎಂದು ಪ್ರದರ್ಶಿಸಲಾಯಿತು. ಮೈಕ್ ನ ನೇಮ್ ಬೋರ್ಡ್ ನಲ್ಲಿಯೂ Bharat ಎಂದು ಪ್ರದರ್ಶಿಸಲಾಯಿತು.
ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಜಿ-20 ಶೃಂಗಸಭೆ ಸ್ಥಳವಾದ ಭಾರತ್ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಸ್ವಾಗತಿಸಿದರು.
ಜಿ-20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಉಲ್ಲೇಖದ ನಂತರ ವಿವಾದಕ್ಕ ಕಾರಣವಾಗಿದ್ದು, ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲೈಯನ್ಸ್ (INDIA) ಎಂದು ಹೆಸರಿಟ್ಟಿರುವುದರಿಂದ ಹೆಸರು ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಟೀಕಿಸುತ್ತಿವೆ.
ಇದನ್ನೂ ಓದಿ: ಜಿ20 ವೇದಿಕೆ 'ಭಾರತ ಮಂಟಪ'ಕ್ಕೆ ಪ್ರಧಾನಿ ಮೋದಿ, ವಿಶ್ವ ನಾಯಕರು ಆಗಮನ; 'ಒಂದು ಭೂಮಿ · ಒಂದು ಕುಟುಂಬ · ಒಂದು ಭವಿಷ್ಯ' ಧ್ಯೇಯವಾಕ್ಯ
ಕೆಲವು ನಾಯಕರು 'ಇಂಡಿಯಾ' ಎಂಬ ಇಂಗ್ಲಿಷ್ ಹೆಸರನ್ನು ವಸಾಹತುಶಾಹಿ ಪರಂಪರೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಸಂವಿಧಾನದಲ್ಲಿ ದೇಶಕ್ಕೆ ಎರಡೂ ಹೆಸರುಗಳನ್ನು ಬಳಸಲಾಗಿದೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳುವುದರೊಂದಿಗೆ 'ಭಾರತ್ ವರ್ಸಸ್ ಇಂಡಿಯಾ' ಚರ್ಚೆಗೆ ಸ್ವಲ್ಪ ಕಡಿವಾಣ ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


