ದೇಶ

 ಹಿಟ್ಲರ್ ಗೆ ಉದಯನಿಧಿ ಸ್ಟಾಲಿನ್ ಹೋಲಿಸಿದ ಬಿಜೆಪಿ!

ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಹಿನ್ನೆಲೆಯಲ್ಲಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಬಿಜೆಪಿ ಹೋಲಿಸಿದೆ.

 ಹಿಟ್ಲರ್ ಗೆ ಉದಯನಿಧಿ ಸ್ಟಾಲಿನ್ ಹೋಲಿಸಿದ ಬಿಜೆಪಿ!
ಉದಯನಿಧಿ ಸ್ಟಾಲಿನ್
Published On :

ನವದೆಹಲಿ: ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ಹಿನ್ನೆಲೆಯಲ್ಲಿ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ನಾಜಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಬಿಜೆಪಿ ಹೋಲಿಸಿದೆ.  

ಉದಯನಿಧಿ ಸ್ಟಾಲಿನ್ ಹೇಳಿಕೆಯು "ಕಲಬೆರಕೆ ರಹಿತ ದ್ವೇಷದ ಭಾಷಣವಾಗಿದೆ. ಅಲ್ಲದೇ, ದೇಶದ ಶೇ. 80 ರಷ್ಟಿರುವ ಸನಾತನ ಧರ್ಮದವರ 'ಜನಾಂಗೀಯ ಹತ್ಯೆಯ ಕರೆಯಾಗಿದೆ ಎಂದು ಆರೋಪಿಸಲಾಗಿದೆ.

"ಹಿಟ್ಲರ್ ಯಹೂದಿಗಳ ವರ್ಣನೆ ಮತ್ತು ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಹೇಗೆ ಬಣ್ಣಿಸಿದ್ದಾರೆ ಎಂಬುದರ ನಡುವೆ ವಿಲಕ್ಷಣವಾದ ಹೋಲಿಕೆಯಿದೆ. ಹಿಟ್ಲರನಂತೆ ಉದಯ ನಿಧಿ ಸ್ಟಾಲಿನ್ ಕೂಡಾ  ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನಾಜಿ ದ್ವೇಷವು ಹತ್ಯಾಕಾಂಡದಲ್ಲಿ ಹೇಗೆ ಪರಾಕಾಷ್ಠೆಯಾಯಿತು, ಸುಮಾರು 6 ಮಿಲಿಯನ್ ಯುರೋಪಿಯನ್ ಯಹೂದಿಗಳು ಮತ್ತು ಕನಿಷ್ಠ 5 ಮಿಲಿಯನ್ ಸೋವಿಯತ್ ಯುದ್ಧ ಕೈದಿಗಳು ಮತ್ತು ಇತರ ಸಂತ್ರಸ್ತರನ್ನು ಕೊಂದರು ಎಂದು ನಮಗೆ ತಿಳಿದಿದೆ ಎಂದು ಬಿಜೆಪಿ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಲಾಗಿದೆ.

ಹೊಸದಾಗಿ ರಚನೆಗೊಂಡಿರುವ INDIA ಮೈತ್ರಿಕೂಟದ ವಿರುದ್ಧವೂ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಸ್ಟಾಲಿನ್ ಗೆ ಕಾಂಗ್ರೆಸ್ ಮತ್ತು ವಿಪಕ್ಷಗಳ ಮೈತ್ರಿಕೂಟದ  ಬೆಂಬಲವು ಅತ್ಯಂತ ಗೊಂದಲಕಾರಿಯಾಗಿದೆ' ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.