ಬಿಜೆಪಿ ಸಂಪತ್ತು 6,046 ಕೋಟಿ ರೂ., ಕಾಂಗ್ರೆಸ್ 805 ಕೋಟಿ ರೂ. ಆಸ್ತಿ ಹೊಂದಿದೆ
ದೇಶದ ಎಂಟು ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಒಟ್ಟು 8,829.16 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿವೆ. ಈ ಪೈಕಿ ಆಡಳಿತರೂಢ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, 6,046 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದೆ.

ನವದೆಹಲಿ: ದೇಶದ ಎಂಟು ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಒಟ್ಟು 8,829.16 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿವೆ. ಈ ಪೈಕಿ ಆಡಳಿತರೂಢ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷವಾಗಿದ್ದು, 6,046 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದೆ.
2020-21ರಲ್ಲಿ ಈ ಎಂಟು ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ 7,297.62 ಕೋಟಿ ರೂ.ಗಳಷ್ಟಿತ್ತು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ.
ಎಂಟು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ಸಿಪಿಐ(ಎಂ), ಎಐಟಿಸಿ ಮತ್ತು ಎನ್‌ಪಿಇಪಿ ಘೋಷಿಸಿದ 2020-21 ಮತ್ತು 2021-22ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಎಡಿಆರ್ ವಿಶ್ಲೇಷಿಸಿದೆ.
ಎಡಿಆರ್ ಪ್ರಕಾರ, 2020-21ರ ಆರ್ಥಿಕ ವರ್ಷದಲ್ಲಿ, ಬಿಜೆಪಿಯು 4,990 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿತ್ತು. 2021-22 ರಲ್ಲಿ ಕೇಸರಿ ಪಕ್ಷದ ಆಸ್ತಿ 6,046.81 ಕೋಟಿಗೆ ಅಂದರೆ ಶೇ. 21.17 ರಷ್ಟು ಹೆಚ್ಚಾಗಿದೆ.
2020-21ರಲ್ಲಿ ಕಾಂಗ್ರೆಸ್ ಘೋಷಿತ ಆಸ್ತಿ 691.11 ಕೋಟಿ ರೂ.ಗಳಷ್ಟಿತ್ತು. ಇದು 2021-22ರಲ್ಲಿ ಶೇ.16.58 ರಷ್ಟು ಏರಿಕೆಯಾಗಿ 805.68 ಕೋಟಿ ರೂ.ಗೆ ತಲುಪಿದೆ. ಬಿಎಸ್ಪಿ ತನ್ನ ವಾರ್ಷಿಕ ಘೋಷಿತ ಆಸ್ತಿಯಲ್ಲಿ ಇಳಿಕೆಯನ್ನು ತೋರಿಸಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ ಎಂದು ವರದಿ ಹೇಳಿದೆ.
2020-21 ಮತ್ತು 2021-22 ರ ನಡುವೆ BSP ಯ ಒಟ್ಟು ಆಸ್ತಿ 732.79 ಕೋಟಿಯಿಂದ 690.71 ಕೋಟಿಗೆ ಶೇಕಡಾ ಅಂದರೆ 5.74 ರಷ್ಟು ಕಡಿಮೆಯಾಗಿದೆ. ಟಿಎಂಸಿಯ ಒಟ್ಟು ಆಸ್ತಿ 2020-21ರಲ್ಲಿ ರೂ.182.001 ಕೋಟಿಯಿಂದ ರೂ.458.10 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.151.70ರಷ್ಟು ಹೆಚ್ಚಳವಾಗಿದೆ ಎಂದು ಎಡಿಆರ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


