ದೇಶ

ಬಾತ್‌ರೂಂ ಒಳಗೆ ಕೂಡಿಹಾಕಿ ಅಪ್ರಾಪ್ತ ಬಾಲಕಿಗೆ ಕಿರುಕುಳ, ದೇಹದ ಹಲವು ಕಡೆ ಸುಟ್ಟ ಗಾಯ!

ಮಹಾರಾಷ್ಟ್ರದ ನಾಗ್ಪುರದಲ್ಲಿ 10 ವರ್ಷದ ಬಾಲಕಿಯನ್ನು ಐದು ದಿನಗಳ ಕಾಲ ಬಾತ್ ರೂಂ ಒಳಗೆ ಬೀಗ ಹಾಕಿ ಕೂಡಿಹಾಕಿದ್ದು, ಆಕೆಯ ಖಾಸಗಿ ಭಾಗಗಳು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬಾತ್‌ರೂಂ ಒಳಗೆ ಕೂಡಿಹಾಕಿ ಅಪ್ರಾಪ್ತ ಬಾಲಕಿಗೆ ಕಿರುಕುಳ, ದೇಹದ ಹಲವು ಕಡೆ ಸುಟ್ಟ ಗಾಯ!
ಸಾಂದರ್ಭಿಕ ಚಿತ್ರ
Published On :

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ 10 ವರ್ಷದ ಬಾಲಕಿಯನ್ನು ಐದು ದಿನಗಳ ಕಾಲ ಬಾತ್ ರೂಂ ಒಳಗೆ ಬೀಗ ಹಾಕಿ ಕೂಡಿಹಾಕಿದ್ದು, ಆಕೆಯ ಖಾಸಗಿ ಭಾಗಗಳು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ  ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಬೆಸಾ-ಪಿಪ್ಲಾ ರಸ್ತೆಯ ಅಥರ್ವ ನಗರಿ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿಗಳು ಕೆಲಸಕ್ಕೆ ಕರೆ ತಂದಿದ್ದ ಬಾಲಕಿಯನ್ನು ಬಾತ್ ರೂಂನಲ್ಲಿ ಬೀಗ ಹಾಕಿ ಕೂಡಿ ಹಾಕಿದ್ದು, ಆಕೆಗೆ ತಿನ್ನಲು ಕೆಲವು ಬ್ರೆಡ್ ಪ್ಯಾಕೆಟ್ ಗಳನ್ನು ಇಟ್ಟು ತೆರಳಿದ್ದರು ಎಂದು ನಾಗ್ಪುರ ಡಿಸಿಪಿ ವಿಜಯಕಾಂತ್ ಸಾಗರ್ ಹೇಳಿದ್ದಾರೆ. 

ವಿದ್ಯುತ್ ಬಿಲ್ ಪಾವತಿಸದ ಕಾರಣ, ಇಂಧನ ಇಲಾಖೆ ನೌಕರರು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಫ್ಲ್ಯಾಟ್‌ಗೆ ತಲುಪಿದಾಗ ಆ ಬಾಲಕಿ ಸಹಾಯಕ್ಕಾಗಿ ಕಿಟಕಿ ಮೂಲಕ ನೋಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ನೆರೆಹೊರೆಯವರಿಗೆ ಮಾಹಿತಿ ನೀಡಿದ ಉದ್ಯೋಗಿಗಳು ಬೀಗ ಒಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.

 ಆರೋಪಿಯನ್ನು ತಹಾ ಅರ್ಮಾನ್ ಇಸ್ತಿಯಾಕ್ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಆರೋಪಿಯ ಪತ್ನಿ ಹಿನಾ ಮತ್ತು ಸೋದರ ಮಾವ ಅಜರ್ ಪರಾರಿಯಾಗಿದ್ದಾನೆ ಎಂದು ಗುರುತಿಸಲಾಗಿದೆ. ಇಬ್ಬರ ಬಂಧನಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.