ಒಡಿಶಾ: ಪತ್ನಿಯ ಶೀಲ ಶಂಕಿಸಿದ ಪತಿ, ಜಗಳದಲ್ಲಿ ಪತಿಯ ಗುಪ್ತಾಂಗ ಕತ್ತರಿಸಿದ ಪತ್ನಿ
ಒಡಿಶಾ ರಾಜ್ಯದ ಅಂಗುಲ್ ಎಂಬಲ್ಲಿನ ನಾಲ್ಕೋ ಪೊಲೀಸ್ ವ್ಯಾಪ್ತಿಯ ಕಂದಸರ್ ಗ್ರಾಮದಲ್ಲಿ ಮೊನ್ನೆ ಭಾನುವಾರ ರಾತ್ರಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದು ತಾರಕಕ್ಕೇರಿ ಪತ್ನಿ ಪತಿಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ವರದಿಯಾಗಿದೆ.

ಅಂಗುಲ್(ಒಡಿಶಾ): ಒಡಿಶಾ ರಾಜ್ಯದ ಅಂಗುಲ್ ಎಂಬಲ್ಲಿನ ನಾಲ್ಕೋ ಪೊಲೀಸ್ ವ್ಯಾಪ್ತಿಯ ಕಂದಸರ್ ಗ್ರಾಮದಲ್ಲಿ ಮೊನ್ನೆ ಭಾನುವಾರ ರಾತ್ರಿ ಗಂಡ-ಹೆಂಡತಿ ಮಧ್ಯೆ ಜಗಳ ನಡೆದು ತಾರಕಕ್ಕೇರಿ ಪತ್ನಿ ಪತಿಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ವರದಿಯಾಗಿದೆ.
ಸಂತ್ರಸ್ತ ವ್ಯಕ್ತಿಯನ್ನು ಪರಮಾನಂದ ಮುದುಲಿ (45ವ) ಎಂದು ಗುರುತಿಸಲಾಗಿದ್ದು, ಅಂಗುಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಪರಮಾನಂದ ಪತ್ನಿ ಸುಕಾಂತಿ ಮುದುಳಿ.
ಪರಮಾನಂದ, ಪತ್ನಿ ವಂಚನೆ ಮಾಡಿದ್ದಾಳೆಂದು ಶಂಕಿಸಿ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಭಾನುವಾರ ರಾತ್ರಿ ಪತಿ ಪರಮಾನಂದ ಮತ್ತೊಮ್ಮೆ ಸುಕಾಂತಿಗೆ ವಿವಾಹೇತರ ಸಂಬಂಧ ಇದೆ ಎಂದು ಆರೋಪಿಸಿ ಜಗಳ ತೆಗೆದಿದ್ದರು. ಕೋಪದ ಭರದಲ್ಲಿ ಸುಕಾಂತಿ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತಿಯ ಗುಪ್ತಾಂಗವನ್ನು ಕತ್ತರಿಸಿದ್ದಾಳೆ.
ಪರಮಾನಂದನ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಅವರ ಮನೆಗೆ ಬಂದು ನೋಡಿದಾಗ ಅವರು ತೀವ್ರ ರಕ್ತಸ್ರಾವದಲ್ಲಿ ಬಿದ್ದು ಹೊರಳಾಡುತ್ತಿರುವುದು ಕಾಣಿಸಿತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ನಾಲ್ಕೊ ಐಐಸಿ ಪ್ರದೀಪ್ ಮಹಂತ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


